ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ಪರೀಕ್ಷೆಗೆ 4,721, ಶಿಕ್ಷಣ ಪರೀಕ್ಷೆಗೆ 2,694 ವಿದ್ಯಾರ್ಥಿಗಳು ಹಾಜರು

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ
Published 4 ಮಾರ್ಚ್ 2024, 16:31 IST
Last Updated 4 ಮಾರ್ಚ್ 2024, 16:31 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಿಯುಸಿ ವಾರ್ಷಿಕ ಪರೀಕ್ಷೆಯ ಗಣಿತ ಹಾಗೂ ಶಿಕ್ಷಣ ವಿಷಯದ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 4,798 ವಿದ್ಯಾರ್ಥಿಗಳ ಪೈಕಿ 4,721 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ವಿದ್ಯಾರ್ಥಿಗಳು 77 ಗೈರಾಗಿದ್ದಾರೆ.

ರಾಯಚೂರು ತಾಲ್ಲೂಕಿನಲ್ಲಿ 1,873 ವಿದ್ಯಾರ್ಥಿಗಳು ಹಾಜರಾಗಿದ್ದರೆ, 41 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 1,050 ಹಾಜರು, 9 ಗೈರು, ಮಾನ್ವಿ 294 ಹಾಜರು 9 ಗೈರು, ಸಿಂಧನೂರು ತಾಲ್ಲೂಕಿನಲ್ಲಿ 1,092 ಹಾಜರು 9 ವಿದ್ಯಾರ್ಥಿಗಳು ಗೈರು, ದೇವದುರ್ಗ ತಾಲ್ಲೂಕಿನಲ್ಲಿ 265 ವಿದ್ಯಾರ್ಥಿಗಳು ಹಾಜರು, 6 ವಿದ್ಯಾರ್ಥಿಗಳು ಗೈರು, ಮಸ್ಕಿ ತಾಲ್ಲೂಕಿನಲ್ಲಿ 87 ಹಾಜರು, 2 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸಿರವಾರ ತಾಲ್ಲೂಕಿನಲ್ಲಿ 60 ವಿದ್ಯಾರ್ಥಿಗಳು ಹಾಜರಾಗಿದ್ದರೆ ಒಬ್ಬ ವಿದ್ಯಾರ್ಥಿ ಗೈರಾಗಿದ್ದಾರೆ.

ಶಿಕ್ಷಣ ವಿಷಯದ ಪರೀಕ್ಷೆಗೆ ಒಟ್ಟು 3,044 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ಇದರಲ್ಲಿ ಒಟ್ಟು 2,694 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. 350 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಜಿಲ್ಲೆಯ ರಾಯಚೂರು ತಾಲ್ಲೂಕಿನಲ್ಲಿ 539 ವಿದ್ಯಾರ್ಥಿಗಳು ಹಾಜರಾಗಿದ್ದರೆ, 82 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಲಿಂಗಸುಗೂರು 626 ಹಾಜರು 40 ಗೈರು, ಮಾನ್ವಿ 96 ಹಾಜರು 09 ಗೈರು, ಸಿಂಧನೂರು ತಾಲ್ಲೂಕಿನಲ್ಲಿ 749 ಹಾಜರು 89 ಗೈರು, ದೇವದುರ್ಗ ತಾಲೂಕಿನಲ್ಲಿ 461 ಹಾಜರು, 107 ವಿದ್ಯಾರ್ಥಿಗಳು ಗೈರು, ಮಸ್ಕಿಯಲ್ಲಿ 161 ಹಾಜರು 12 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸಿರವಾರ ತಾಲ್ಲೂಕಿನಲ್ಲಿ 62 ವಿದ್ಯಾರ್ಥಿಗಳು ಹಾಜರಾಗಿದ್ದರೆ 11 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT