ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಎಡಿಸಿ ಸಭೆ

ಅಂತಿಮ ಮತದಾರರ ಪಟ್ಟಿ ಬಿಡುಗಡೆ
Published 22 ಜನವರಿ 2024, 15:53 IST
Last Updated 22 ಜನವರಿ 2024, 15:53 IST
ಅಕ್ಷರ ಗಾತ್ರ

ರಾಯಚೂರು: ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ 8,17,652 ಪುರುಷರು, 8,46,574 ಮಹಿಳೆಯರು ಹಾಗೂ 263 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಸೇರಿ ಒಟ್ಟು 16,64,489 ಮತದಾರಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಅಂತಿಮ ಮತದಾರರ ಪಟ್ಟಿ ಪ್ರಚಾರಪಡಿಸುವ ಕುರಿತು ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 18, 19 ವರ್ಷದ ಒಟ್ಟು 30,626 ಯುವ ಮತದಾರರಿದ್ದು, ಅದರಲ್ಲಿ 17,463 ಯುವಕರು, 13,161 ಯುವತಿಯರು, ಇಬ್ಬರು ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ ಎಂದು ತಿಳಿಸಿದರು.

ಉಳಿದಂತೆ 18,173 ಅಂಗವಿಕಲ ಮತದಾರರಿದ್ದು, 10,510 ಪುರುಷ ಮತ್ತು 7663 ಅಂಗವಿಕಲ ಮಹಿಳಾ ಮತದಾರರಿದ್ದಾರೆ ಎಂದು ಹೇಳಿದರು.

ಚುನಾವಣಾ ತಹಶೀಲ್ದಾರ್ ಪರಶುರಾಮ, ಶಿರಸ್ತೇದಾರ ರಿಷಿಕೇಷ, ಪ್ರಥಮ ದರ್ಜೆ ಸಹಾಯಕ ರಮೇಶ, ತಾಂತ್ರಿಕ ಸಮಾಲೋಚಕ ಶಿವರಾಜ, ರಾಜಕೀಯ ಮುಖಂಡರಾದ ರವಿಕುಮಾರ, ಶಂಕರ ಕಲ್ಲೂರು, ಈರೇಶ, ತಿರುಮಲ ರೆಡ್ಡಿ ಹಾಗೂ ಕೆ.ಜಿ ವೀರೇಶ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT