ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಶಿಕ್ಷಣ ಪಡೆದು ಜಾಗೃತರಾಗಿ’

Published 30 ಜುಲೈ 2023, 14:30 IST
Last Updated 30 ಜುಲೈ 2023, 14:30 IST
ಅಕ್ಷರ ಗಾತ್ರ

ರಾಯಚೂರು: ‘ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಜಾಗೃತರಾಗಬೇಕು. ಕಾನೂನು ಅರಿವು ಹೊಂದುವ ಮೂಲಕ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ದಯಾನಂದ ಬೇಲೂರೆ ಹೇಳಿದರು.

ನಗರದ ಆಶಾಪುರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಮಾನವ ಕಳ್ಳ ಸಾಗಣೆ ತಡೆ  ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

‘ಮಾನವ ಕಳ್ಳ ಸಾಗಣೆ ಕಂಡು ಬಂದರೆ ತಕ್ಷಣ ಪೊಲೀಸ್‌ ಸಹಾಯವಾಣಿ 112 ಅಥವಾ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿ ನೀಡಬೇಕು’ಎಂದು ತಿಳಿಸಿದರು.

ರೈಲ್ವೆ ಪೊಲೀಸ್‌ ಅಧಿಕಾರಿ ಅಭಿಷೇಕಕುಮಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್ ಅಹ್ಮದ್.ಜಿ, ಉಡಮಗಲ್‌ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ದುಂಡಪ್ಪ ಬಿರಾದಾರ ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯೆ ಕಲ್ಪನಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ರೈಲ್ವೆ ಪೊಲೀಸ್‌ನ ಸಿ.ನರಸಿಂಹ ಮೂರ್ತಿ, ವೆಂಕಟೇಶ ವೈ.ಎನ್, ಹುಲಿಗೆಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಹನುಮೇಶ, ಕಿರಲಿಂಗಪ್ಪ, ಶಿವರಾಜ,  ಖಾಜಾಬಿ, ರಮೇಶ, ವಿಶಾಲಕ್ಷ್ಮಿ ನರಸಿಂಹ ಜಿ.ಬಿ., ಈರಮ್ಮ ಹಾಗೂ ದಿನೇಶಕಕುಮಾರ ಇದ್ದರು.

ಶಿವರಾಜ ಸ್ವಾಗತಿಸಿದರು. ತಿಕ್ಕಯ್ಯ ನಿರೂಪಿಸಿದರು. ಹನುಮೇಶ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT