ರಾಯಚೂರು: ಮಳೆಗಾಲ ಆರಂಭವಾಗಿ ಒಂದು ತಿಂಗಳು ಮುಗಿಯುತ್ತಾ ಬಂದಿದ್ದರೂ ಮಳೆರಾಯನ ದರ್ಶನವಿಲ್ಲದೆ ರೈತರು ಆತಂಕಕ್ಕೀಡಾಗಿದ್ದಾರೆ. ಮೇ ಅಂತ್ಯದಲ್ಲಿ ಸುರಿದ ಅಡ್ಡಮಳೆ ನಂಬಿ ಬಿತ್ತನೆ ಮಾಡಿರುವ ಕೆಲವು ರೈತರು ಈಗ ನಷ್ಟ ಅನುಭವಿಸುವಂತಾಗಿದೆ.

ಬಿತ್ತನೆ ಮಾಡಿರುವ ಬೀಜಕ್ಕೆ ತೇವಾಂಶ ಕೊರತೆಯಾಗಿದ್ದು, ರಾಯಚೂರು, ದೇವದುರ್ಗ ಭಾಗಗಳಲ್ಲಿ ಇನ್ನೂ ಭೂಮಿಯೊಳಗಿನ ಬೀಜಗಳು ಮೊಳಕೆ ಒಡೆದಿಲ್ಲ. ಲಿಂಗಸುಗೂರು, ಮಸ್ಕಿ, ಸಿಂಧನೂರು, ಮಾನ್ವಿಯ ಕೆಲವು ಭಾಗಗಳಲ್ಲಿ ತುಂತುರು ಸುರಿದ ಮಳೆಯಿಂದ ಭೂಮಿಯಲ್ಲಿ ಸ್ವಲ್ಪ ತೇವಾಂಶ ಹಿಡಿದಿದೆ. ಬೀಜಗಳು ಮೊಳಕೆಯಾಗಿ, ಕೆಲವು ಜಮೀನುಗಳಲ್ಲಿ ಬೆಳೆಯೊಂದಿಗೆ ಕಳೆ ಕೂಡಾ ಬೆಳೆಯುತ್ತಿದೆ.

ಜಿಲ್ಲಾ ಕೃಷಿ ಇಲಾಖೆ ಮಾಹಿತಿ ಪ್ರಕಾರ, ಮುಂಗಾರು ಹಂಗಾಮಿನಲ್ಲಿ ಒಟ್ಟು 5,35,471 ಹೆಕ್ಟೇರ್ ಬಿತ್ತನೆಯಾಗುವ ಅಂದಾಜು ಗುರಿ ಮಾಡಲಾಗಿದೆ. ಅದರಲ್ಲಿ 2,44,767 ಹೆಕ್ಟೇರ್ ಮಳೆಯಾಶ್ರಿತ ಖುಷ್ಕಿ ಜಮೀನು ಮತ್ತು 2,90,704 ಹೆಕ್ಟೇರ್ ಕಾಲುವೆ, ಕೊಳವೆಬಾವಿ ಹಾಗೂ ನದಿನೀರು ಆಶ್ರಿತ ನೀರಾವರಿ ಜಮೀನಿದೆ. ಅಸಮರ್ಪಕವಾಗಿ ಸುರಿಯುತ್ತಿರುವ ಮಳೆ ಕಾರಣದಿಂದ ಖುಷ್ಕಿ ಇರುವ ಕಡೆಗಳಲ್ಲಿ ಶೇ 20 ರಷ್ಟು (ಸುಮಾರು 1.07 ಲಕ್ಷ ಹೆಕ್ಟೇರ್) ಬಿತ್ತನೆಯಾಗಿದೆ.

ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿಲ್ಲ. ಹೀಗಾಗಿ ಮುಗ್ಗಟ್ಟು ಬಿತ್ತನೆ ಮಾಡಿರುವ ರೈತರು ಆರಂಭದಲ್ಲೇ ನಷ್ಟದ ಭೀತಿಗೆ ಒಳಗಾಗಿದ್ದಾರೆ. ರಾಯಚೂರು ಮತ್ತು ದೇವದುರ್ಗದ ಬಹುತೇಕ ಕಡೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರಿದ ಕಾರಣ, ಬೀಜಗಳು ನೆಲದಿಂದ ಮೇಲಕ್ಕೆ ಬರುತ್ತಿಲ್ಲ. ಮುಗಿಲಕಡೆಗೆ ಮುಖಮಾಡಿರುವ ರೈತರು ಬೀಜ, ಗೊಬ್ಬರಕ್ಕಾಗಿ ಮಾಡಿದ ನಷ್ಟದಿಂದ ಪಾರಾಗಲು ಮಳೆರಾಯನನ್ನು ಪ್ರಾರ್ಥಿಸುತ್ತಿದ್ದಾರೆ.

ಮುಂಗಾರು ಪೂರ್ವ ಮೇ ತಿಂಗಳು ವಾಡಿಕೆಗಿಂತಲೂ ಶೇ 85 ರಷ್ಟು ಅಧಿಕ ಮಳೆ ಸುರಿದ ಕಾರಣ, ಹಿರಿಹಿರಿ ಹಿಗ್ಗಿದ್ದ ರೈತರು, ಕೆಲವೆಡೆ ಬಿತ್ತನೆ ಮಾಡಿದ್ದರು. ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಇನ್ನೊಂದು ಮಳೆ ಸುರಿಯುವುದಕ್ಕೆ ಕಾಯುತ್ತಿದ್ದು, ಭೂಮಿಹದ ಮಾಡಿದ್ದಾರೆ. ಸೂರ್ಯಕಾಂತಿ, ಹತ್ತಿ, ಭತ್ತ ಬಿತ್ತನೆ ವ್ಯಾಪಕವಾಗಿ ಬಿತ್ತನೆಯಾಗುವ ನಿರೀಕ್ಷೆ ಇದೆ.

ಜೂನ್ ತಿಂಗಳು ವಾಡಿಕೆ ಮಳೆ ಬೀಳದ ಕಾರಣ, ಬಹುತೇಕ ಎಲ್ಲ ತಾಲ್ಲೂಕುಗಳಲ್ಲಿ ಶೇ 50 ರಷ್ಟು ಮಳೆ ಕೊರತೆಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕಳೆದ ವಾರದ ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆ ಪ್ರಕಾರ, ಇದುವರೆಗೂ ಮಳೆ ಸುರಿದಿಲ್ಲ. ಸಾಧಾರಣ ಮಳೆಯಾದರೆ ಸಾಕು ಎನ್ನುವ ಸಂಕಷ್ಟದಲ್ಲಿ ರೈತರಿದ್ದಾರೆ. ಮೋಡಕವಿದ ವಾತಾವರಣ ಇದ್ದರೂ ಮಳೆ ಸುರಿಯುತ್ತಿಲ್ಲ. ಮೋಡಗಳನ್ನು ನಂಬಿ ಬಿತ್ತನೆ ಮಾಡಿರುವವರು ಮೋಸ ಹೋದವರಂತೆ ಚಡಿಪಡಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.