ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಜಯಂತಿ: ಸರಳ ಆಚರಣೆ

ಜಿಲ್ಲೆಯಲ್ಲಿ ಸಂವಿಧಾನ ಶಿಲ್ಪಿಗೆ ಪುಷ್ಪನಮನ, ವಿವಿಧ ಸಂಘಟನೆಗಳಿಂದ ಕಾರ್ಯಕ್ರಮ
Last Updated 15 ಏಪ್ರಿಲ್ 2021, 5:04 IST
ಅಕ್ಷರ ಗಾತ್ರ

ರಾಯಚೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರ ನೇತೃತ್ವದಲ್ಲಿ ಪುಷ್ಪಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು.

ಮಸ್ಕಿ ಉಪಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹಾಗೂ ಕೋವಿಡ್ ಕಾರಣದಿಂದಾಗಿ ಈ ಬಾರಿ ಅತ್ಯಂತ ಸರಳವಾಗಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ, ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ್, ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ, ತಹಶೀಲ್ದಾರ್ ಡಾ. ಹಂಪಣ್ಣ ಸಜ್ಜನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ನಮಿಸಿದರು.

ವಿವಿಧ ಮುಖಂಡರು, ಜನಪ್ರತಿನಿಧಿಗಳು, ಅಭಿಮಾನಿಗಳು ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು.

ನಾಮಫಲಕ ಉದ್ಘಾಟನೆ

ಸಿಂಧನೂರು: ಜೈಭೀಮ್ ಘರ್ಜನೆ ಸಂಘಟನೆ ವತಿಯಿಂದ ಸ್ಥಳೀಯ ಅಂಬೇಡ್ಕರ್ ನಗರದಲ್ಲಿ ಅಂಬೇಡ್ಕರ್ಜಯಂತಿ ಆಚರಣೆ, ನಾಮಫಲಕ ಉದ್ಘಾಟನೆ ಹಾಗೂ ಪದಾಧಿಕಾರಿ ಆಯ್ಕೆ ಕಾರ್ಯಕ್ರಮ ಬುಧವಾರ ನಡೆಯಿತು.

ಕೆಆರ್‍ಎಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ್ ಮಾತನಾಡಿದರು.

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಜೈಭೀಮ್ ಘರ್ಜನೆ ಸಂಸ್ಥಾಪಕ ನಿರುಪಾದಿ ಸಾಸಲಮರಿ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ಅಲ್ಲಮಪ್ರಭು ಪೂಜಾರ್, ಹನುಮಂತಪ್ಪ ಪನ್ನೂರು, ನಿರುಪಾದೆಪ್ಪ, ಜಗದೀಶ ವಕೀಲ, ಮರಿಯಪ್ಪ, ಮೌಲಪ್ಪ ಕಟ್ಟಿಮನಿ, ನರಸಪ್ಪ ಕಟ್ಟಿಮನಿ, ಹನುಮಂತ ಕೆಇಬಿ, ಹನುಮಂತಪ್ಪ ಬೂದಿವಾಳ ವಕೀಲ, ಹೊನ್ನೂರು ಕಟ್ಟಿಮನಿ, ಛಲವಾದಿ ಮಹಾಸಭಾ ಅಧ್ಯಕ್ಷ ಡಾ.ರಾಮಣ್ಣ ಇದ್ದರು.

ಸಮಗಾರ ಸಮಾಜ: ಇಲ್ಲಿನ ಪ್ರಶಾಂತನಗರದ ಕೆಂಚಮ್ಮ ದೇವಿ ದೇವಸ್ಥಾನದಲ್ಲಿ ಸಮಗಾರ ಅರಳಯ್ಯ ಸಮಾಜ ತಾಲ್ಲೂಕು ಘಟಕದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ರಮೇಶ, ಸದಸ್ಯರಾದ ವಿಜಯಕುಮಾರ, ರಾಘವೇಂದ್ರ, ಯಮನೂರಪ್ಪ, ರವಿ, ಯಮನಪ್ಪ, ಲಾಲಪ್ಪ, ಪರಶುರಾಮ ಇದ್ದರು.

ಛಲವಾದಿ ಮಹಾಸಭಾ: ನಗರದ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಛಲವಾದಿ ಮಹಾಸಭಾದಿಂದ ಅಂಬೇಡ್ಕರ್ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಮಹಾಸಭಾ ಅಧ್ಯಕ್ಷ ಡಾ.ರಾಮಣ್ಣ ಗೋನವಾರ, ಪ್ರಧಾನ ಕಾರ್ಯದರ್ಶಿ ಶರಣಬಸವ ಮಲ್ಲಾಪೂರ, ಮುಖಂಡರಾದ ಬಸವರಾಜ ಕುನ್ನಟಗಿ, ಹುಸೇನಪ್ಪ ಗೊರೇಬಾಳ, ಹನುಮಂತ ಗೋಮರ್ಸಿ ಇದ್ದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ನಗರ ಮಂಡಲ ಅಧ್ಯಕ್ಷೆ ಪ್ರೇಮಾ ಸಿದ್ದಾಂತಿಮಠ, ಮಧ್ವರಾಜ್ ಆಚಾರ್ಯ, ಮಮತಾ ಹಿರೇಮಠ, ಮಹಿಬೂಬ್ ಬೂತಲದಿನ್ನಿ, ರವಿಕುಮಾರ ಉಪ್ಪಾರ, ಮಲ್ಲಿಕಾರ್ಜು ಕಾಟಗಲ್ ಇದ್ದರು.

ನೀರಾವರಿ ಇಲಾಖೆ: ನಗರದ ನೀರಾವರಿ ಇಲಾಖೆಯ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕಚೇರಿಯ ಅಧೀಕ್ಷಕ ಶಿವಕುಮಾರ, ಎಂಜನಿಯರ್‍ಗಳಾದ ಲಕ್ಷ್ಮಿ, ನೇತ್ರವತಿ, ಸಿಬ್ಬಂದಿ ವಿರೂಪಾಕ್ಷಪ್ಪ, ವಿಠಲರಾವ್, ಕಾಶೀಂಸಾಬ, ರಾಜಾ ಹುಸೇನ್, ಸುಲೇಮಾನ್‍ಪಾಷಾ, ಶಂಕ್ರಪ್ಪ, ಗುರುಲಿಂಗಮ್ಮ, ಖಾಜಾಬೀ, ಇರ್ಫಾನ್, ಹನುಮಂತ ಇದ್ದರು.

ಯುವಕ ಮಂಡಳಿ: ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಇಲ್ಲಿನ ಅಂಬೇಡ್ಕರ್ ನಗರದಲ್ಲಿ ಬಾಬಾಸಾಹೇಬ್‍ರ ಜಯಂತಿ ಆಚರಿಸಲಾಯಿತು.

ಯುವ ಕಾಂಗ್ರೆಸ್ ಎಸ್‍ಟಿ ಘಟಕ ಅಧ್ಯಕ್ಷ ನಾಗರಾಜ್ ಕವಿತಾಳ, ಮಂಡಳಿ ಅಧ್ಯಕ್ಷ ಹನುಮಂತ ಕರ್ನಿ, ಉಪಾಧ್ಯಕ್ಷ ಬಿ.ವಿಜಯ್, ವೀರೇಶ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಗಿರಿಜಾಲಿ, ಸಹಕಾರ್ಯದರ್ಶಿ ಕೆ.ಉದಯ್‍ಕುಮಾರ, ಸಂಘಟನಾ ಕಾರ್ಯದರ್ಶಿ ರಮೇಶ, ಖಜಾಂಚಿ ಹನುಮೇಶ, ಸದಸ್ಯರಾದ ಮಹೇಶ ಸುಕಾಲಪೇಟೆ, ಬಸವರಾಜ, ದುರುಗೇಶ ಇದ್ದರು.

ಯೋಗ ಕುಟೀರ: ನಗರದ ಯೋಗ ಕುಟೀರದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಆಚರಿಸಲಾ ಯಿತು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬೀರಪ್ಪ ಶಂಭೋಜಿ ಸ್ವರಚಿತ ಕವನ ವಾಚಿಸಿದರು. ಯೋಗಗುರು ಎಂ.ಭಾಸ್ಕರ್, ಸಿದ್ದು ಪಾಟೀಲ್, ಸುರೇಶಗೌಡ ಇದ್ದರು.

ಬಣಜಿಗ ಸಮಾಜ: ನಗರದ ಪಿಬ್ಲ್ಯೂಡಿ ಕ್ಯಾಂಪಿನಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ನಾಮಫಲಕಕ್ಕೆ ಬಣಜಿಗ ಸಮಾಜದ ಯುವ ಘಟಕದಿಂದ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.

ಮುಖಂಡ ಶಿವಕುಮಾರ ಜವಳಿ, ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಯರದಿಹಾಳ, ಗೌರವಾಧ್ಯಕ್ಷ ಸಂತೋಷ ಅಂಗಡಿ, ಪ್ರಧಾನ ಕಾರ್ಯದರ್ಶಿ ರಂಗನಾಥ ಗೋಮರ್ಸಿ, ಖಜಾಂಚಿ ವೀರೇಶ ದಿದ್ದಿಗಿ, ಸೂಗೂರೇಶ ಬಪ್ಪೂರು, ಬಸವರಾಜ ಬೂತಲದಿನ್ನಿ, ವಿಶ್ವನಾಥ ಚನ್ನಳ್ಳಿ, ಅಮರೇಶ ಇದ್ದರು.

‘ರಾಜಕೀಯ ಸ್ಥಾನಮಾನ ಮರೀಚಿಕೆ’

ದೇವದುರ್ಗ: ತಾಲ್ಲೂಕು ಆಡಳಿತದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಗ್ರೇಡ್-2 ತಹಶೀಲ್ದಾರ್ ಶ್ರೀನಿವಾಸ್ ಚಾಪೆಲ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಇಂದಿರಾ ಮಾತನಾಡಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಶಾಸಕ ಕೆ. ಶಿವನಗೌಡ ನಾಯಕ ಅವರು, ‘ತುಳಿತಕ್ಕೊಳಗಾದ ದಲಿತರಿಗೆ ಇಂದಿಗೂ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ‘ ಎಂದರು.

ಮರಿಲಿಂಗಪ್ಪ ಕೋಳೂರು ಮಾತನಾಡಿದರು.

ಮಲ್ಲೇಶಪ್ಪ ಹುನಗುಂದ ಬಾಡ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಮಸ್ಕಿ, ಕೆ ವಿನೋದ ನಾಯಕ್, ಯಮನೇಶ ಗೌಡಗೇರಾ, ಹನುಮಂತ ಮನ್ನಾಪುರ್, ಜೆಡಿಎಸ್ ಮುಖಂಡೆ ಕರೆಮ್ಮ, ಪುರಸಭೆ ಅಧ್ಯಕ್ಷ ಹನುಮಗೌಡ ಬಡಿಗೇರ, ಭೀಮನ ಗೌಡ ಪಾಟೀಲ್ ಪ್ರಕಾಶಗೌಡ ಅನಿಲ್ ಕುಮಾರ್, ರವಿಕುಮಾರ್, ಪುರಸಭೆ ಸದಸ್ಯ ಮಾನಪ್ಪ ಮೇಸ್ತ್ರಿ, ಸಮಾಜ ಕಲ್ಯಾಣ ತಾಲ್ಲೂಕ ಅಧಿಕಾರಿ ದೇವರಾಜ, ಎಚ್ ಶಿವರಾಜ್, ಪ್ರಕಾಶ್ ಪಾಟೀಲ್ ಅಮರಾಪುರ, ಶಿವರಾಜ ರುದ್ರಾಕ್ಷಿ ಶಿವರಾಯ ಇದ್ದರು.

ಭಾವಚಿತ್ರಕ್ಕೆ ನಮನ

ಮುದಗಲ್: ಡಾ. ಬಿ.ಆರ್‌.ಅಂಬೇಡ್ಕರ ರವರ ಜಯಂತಿ ಪುರಸಭೆ ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಿದರು.

ಡಾ.ಬಿ ಆರ್ ಅಂಬೇಡ್ಕರ ರವರ ಭಾವಚಿತ್ರಕ್ಕೆ ಪುರಸಭೆ ಸದಸ್ಯ ದುರುಗಪ್ಪ ಕಟ್ಟಿಮನಿ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿದರು.

ಭಾರತೀಯ ದಲಿತ ಪ್ಯಾಂಥರ ನಗರ ಘಟಕ ಅಧ್ಯಕ್ಷ ಕೃಷ್ಣ ಚಲುವಾದಿ ನೇತೃತ್ವದಲ್ಲಿ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸುವ ಮೂಲಕ ಜಯಂತಿ ಆಚರಿಸಿದರು.

ಪುರಸಭೆ ಉಪಾಧ್ಯಕ್ಷ ಶಿವನಾಗಪ್ಪ ಬಡಕುರಿ, ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ, ಸದಸ್ಯರಾದ ಅಮೀರ ಬೇಗ ಉಸ್ತಾದ, ಕರಿಯಪ್ಪ ಯಾದವ, ಮಹಿಬೂಬ್ ಕಡ್ಡಿಪುಡಿ, ನಾಗರಾಜ ತಳವಾರ, ರಮೇಶ ಚಲುವಾದಿ, ಬಸವರಾಜ ಬಂಕದಮನಿ, ಶರಣಪ್ಪ ಕಟ್ಟಿಮನಿ, ಪ್ರಮೋದ್, ರಘುವೀರ್ ಚಲುವಾದಿ, ಮೈಬುಬಸಾಬ ಬಾರಿಗಿಡ ವಿರೇಶ ಉಪ್ಪಾರ ಬಿಜಿಪಿ ಅಧ್ಯಕ್ಷ ಸಣ್ಣಸಿದ್ದಯ್ಯ ಮೇಗಳಪೇಟೆ, ಶರಣಪ್ಪ ಹಂಚನಾಳ ನಯೀಮ್, ಪರಶುರಾಮ ಕಟ್ಟಿಮನಿ, ಹನುಮಂತ ನಾಯಕ ಸಂಜೀವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT