ಕವಿತಾಳ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನಿರ್ಮಿಸಿದ ಅಯೋಧ್ಯೆ ರಾಮ ಮಂದಿರ ಮಾದರಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ವಿಶೇಷವಾಗಿ ಸಂಜೆ ವೇಳೆ ಭೇಟಿ ನೀಡುತ್ತಿರುವ ಮಹಿಳೆಯರು, ಮಕ್ಕಳು ಪೂಜೆ ಸಲ್ಲಿಸಿ ಭಜನಾ ಹಾಡುಗಳು, ಕೀರ್ತನೆಗಳನ್ನು ಹಾಡುವ ಮೂಲಕ ಭಕ್ತಿ ತೋರಿದರು.

ತುಮಕೂರು ಮೂಲದ ವಿನಯ ರಾಮ ಅವರು ಥರ್ಮಕೋಲ್ ಬಳಿಸಿ ನಿರ್ಮಿಸಿದ ರಾಮ ಮಂದಿರ ಮಾದರಿ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದೆ. ಹೊರನೋಟದಲ್ಲಿ ರಾಮ ಮಂದಿರವನ್ನು ಕಣ್ತುಂಬಿಕೊಂಡ ಭಕ್ತರು, ಬಾಲರಾಮನ ಭಾವಚಿತ್ರ, ಸೀತಾ ರಾಮ ಪಟ್ಟಾಭಿಷೇಕ, ಲಕ್ಷ್ಮಣ, ಭರತ, ಶತ್ರುಘ್ನ, ಆಂಜನೇಯನ ದರ್ಶನ ಪಡೆದು ಪುನೀತರಾದರು.

‘108 ಕಡೆ ಪ್ರದರ್ಶನ ನೀಡುವ ಸಂಕಲ್ಪ ಹೊಂದಿದ್ದು, ಇದು 85ನೇ ಪ್ರದರ್ಶನವಾಗಿದೆ. ಐದು ದಿನಗಳ ವರೆಗೆ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಪ್ರದರ್ಶನಕಾರ ವಿನಯರಾಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.