ರಾಯಚೂರು: ‘ವಿಶ್ವ ಮಟ್ಟದಲ್ಲಿ ಬಸವಣ್ಣನನ್ನು ಪರಿಚಯಿಸುವ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಠ್ಯಕ್ರಮದಲ್ಲಿ ಬಸವಣ್ಣನ ವಿಸ್ತೃತ ಚರಿತ್ರೆಯನ್ನು ಅಳವಡಿಸಬೇಕು‘ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಬಸವಲಿಂಗಪಟ್ಟದ್ದೇವರು ಹೇಳಿದರು.

ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಸಂಸ್ಕೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಸ್ವಾಗತ. ಪ್ಲೇಟೊ, ಅರಿಸ್ಟಾಟಲ್ ತತ್ವಜ್ಞಾನಿಗಳಂತೆ ಬಸವಣ್ಣನ ನೀತಿಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರವನ್ನೂ ಪಠ್ಯಕ್ರಮದಲ್ಲಿ ಸೇರಿಸಬೇಕು. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು‘ ಎಂದು ಒತ್ತಾಯಿಸಿದರು.

‘ಸಿಬಿಎಸ್ಸಿ ಪಠ್ಯಕ್ರಮದಲ್ಲಿ ಬಸವಣ್ಣನನ್ನು ಪರಿಚಯಿಸಬೇಕು. ಬಸವ ಜಯಂತಿಯನ್ನು ರಾಷ್ಟ್ರ ಮಟ್ಟದಲ್ಲಿ ಆಚರಣೆ ಮಾಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು’ ಎಂದು ಮನವಿ ಮಾಡಿದರು.

‘ರಾಯಚೂರಿನ ಅಭಿಯಾನದಲ್ಲಿ ಎಲ್ಲ ಪಕ್ಷದವರೂ ಸೇರಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಬಸವ ಭಕ್ತರು ಪಾಲ್ಗೊಂಡಿದ್ದಾರೆ. ಇದರಂತೆ ಅಕ್ಟೋಬರ್ 5 ರಂದು ಬೆಂಗಳೂರಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮಕ್ಕೆ ಬರಬೇಕು’ ಎಂದು ಕೇಳಿಕೊಂಡರು.

ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಶಿವಾನಂದ ಕೆಳಗಿನಮನಿ, ‘ಬಸವಣ್ಣನಂತಹ ವ್ಯಕ್ತಿ ಇನ್ನೊಬ್ಬರಿಲ್ಲ. ಬಸವಣ್ಣ ರಾಜಪ್ರಭುತ್ವದಲ್ಲಿ ಇದ್ದರೂ ಜನಸಾಮಾನ್ಯರ ಪರವಾಗಿ ಇದ್ದರು. ಮಾತೃ ಹೃದಯಿಯಾಗಿದ್ದರು. ಅವರ ವೈಚಾರಿಕತೆ ಹಾಗೂ ನಿಲುವುಗಳು ತಳಸಮುದಾಯದವನ್ನು ಮೇಲಕ್ಕೆ ಎತ್ತುವಂತೆ ಮಾಡಿದವು‘ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಶಿವರಾಜ ಪಾಟೀಲ ಮಾತನಾಡಿ, ‘ಬಸವ ಅಭಿಯಾನ ಕೈಬಿಡಬಾರದು. ಇದು ನಿರಂತರವಾಗಿ ನಡೆಯುವಂತಾಗಬೇಕು‘ ಎಂದರು.ಬಸವರಾಜ ಸಾದರ, ಗುರುಬಸವ ಸ್ವಾಮೀಜಿ ಹಾಗೂ ಇಳಕಲ್ ಶ್ರೀಗಳು ಮಾತನಾಡಿದರು ಶಾಸಕ ಬಸನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯ ಶರಣಗೌಡ ಭಯ್ಯಾಪುರ. ಮಾಜಿ ಶಾಸಕರಾದ ಪ್ರತಾಪಗೌಡ, ವೆಂಕಟರಾವ್ ನಾಡಗೌಡ, ಬಸನಗೌಡ ಬ್ಯಾಗವಾಟ್, ರವಿ ಬೋಸರಾಜು, ಶಾಂತಪ್ಪ, ಶಂಕ್ರಪ್ಪ, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.