ಶುಕ್ರವಾರ, ಏಪ್ರಿಲ್ 16, 2021
31 °C

ಧಮ್ಮಪದ ಕೃತಿಯ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸಾಹಿತಿ ವೀರಹನುಮಾನ ರಚಿಸಿದ ಧಮ್ಮಪದ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಜುಲೈ 7ರಂದು ಬೆಳಿಗ್ಗೆ 11.10ಕ್ಕೆ ಕನ್ನಡ ಭವನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಸುರಭಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಜಿ.ಸುರೇಶ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯ ಸಿದ್ಧಾರ್ಥ ಬುದ್ಧವಿಹಾರದ ಸಂಘಾನಂದ ಭಂತೇಜಿ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕಲಬುರ್ಗಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್‌.ಟಿ.ಪೋತೆ ಕೃತಿಯ ಲೋಕಾಪರ್ಣೆ ಮಾಡಲಿದ್ದಾರೆ. ಸಾಹಿತಿ ಬಸವಲಿಂಗ ಸೊಪ್ಪಿಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮಾದೇನೂರು ನಿಂಗಪ್ಪ ಕೃತಿಯ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಲಬುರಗಿಯ ಶ್ರೀಶೈಲ ನಾಗರಾಳ, ಸಾಹಿತಿ ಮಹಾಂತೇಶ ಮಸ್ಕಿ, ಎಚ್.ಎಚ್.ಮ್ಯಾದಾರ ಭಾಗವಹಿಸಲಿದ್ದು, ವೀರ ಹನುಮಾನ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ವೀರಹನುಮಾನ ಅವರು ಕಥೆ, ಕವನ, ಹೈಕು ಜೀವನ ಸೇರಿದಂತೆ ವಿವಿಧ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಅವರು ಬಹಳಷ್ಟು ಕೃತಿಗಳನ್ನು ಸುರಭಿ ಪ್ರಕಾಶನದಿಂದ ಪ್ರಕಟಿಸಲಾಗಿದ್ದು, ಈ ಕೃತಿಯೂ ಪ್ರಕಟಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಜಿ.ಬಸವರಾಜ, ಸೈಯದ್ ಹಫಿಜುಲ್ಲಾ, ಈರಣ್ಣ ಬೆಂಗಾಲಿ ‍ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು