ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಕ್ಷೇತ್ರದ ಸಮಸ್ಯೆ ಚರ್ಚೆ: ಶಾಸಕ ಆರ್‌.ಬಸನಗೌಡ

ಕಾಮಗಾರಿ ಚಾಲನೆ ವೇಳೆ ಶಾಸಕ ಆರ್‌.ಬಸನಗೌಡ ಹೇಳಿಕೆ
Last Updated 12 ಸೆಪ್ಟೆಂಬರ್ 2021, 12:23 IST
ಅಕ್ಷರ ಗಾತ್ರ

ಮಸ್ಕಿ: ನಾರಾಯಣಪುರ ಬಲದಂಡೆಯ 5 (A) ಕಾಲುವೆ ಯೋಜನೆ, ಪೂರ್ಣ ಪ್ರಮಾಣದ ತಾಲ್ಲೂಕು ಕಚೇರಿ ಆರಂಭ ಸೇರಿದಂತೆ ಕ್ಷೇತ್ರದ ಪ್ರಮುಖ ವಿಷಯಗಳ ಬಗ್ಗೆ 13 ರಂದು ಆರಂಭವಾಗಲಿರುವ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಆರ್. ಬಸನಗೌಡ ಹೇಳಿದರು.

ಪಟ್ಟಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿ ಕೆಲಸಗಳಿಗೆ ಚಾಲ‌ನೆ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು 'ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಪ್ರತಿಪಕ್ಷ ದ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ಕ್ಷೇತ್ರದ ನೀರಾವರಿ ಯೋಜನೆ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿದ್ದು, ಅವರು ಸಹ ಸದನದಲ್ಲಿ ಚರ್ಚಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ ಎಂದರು.

ಬರುವ 18 ತಿಂಗಳ ಅಧಿಕಾರದ ಅವಧಿಯಲ್ಲಿ ಪಟ್ಟಣ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ, ಪಟ್ಟಣದಲ್ಲಿ ಇಂದು ಪುರಸಭೆಯ ₹ 65 ಲಕ್ಷ ವೆಚ್ಚದಲ್ಲಿ ಶುದ್ಧಿ ಕುಡಿವ ನೀರಿನ ಘಟಕ, ಉದ್ಯಾನ ನಿರ್ಮಾಣ, ಪ್ಲಾಸ್ಟಿಕ್ ಸಂಗ್ರಹ ಘಟಕ, ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ₹ 3 ಕೋಟಿ ವೆಚ್ಚದಲ್ಲಿ ಮಸ್ಕಿ ಕ್ಯಾತನಟ್ಟಿ ಹಾಗೂ ಮಸ್ಕಿ ಯಿಂದ ಮಸ್ಕಿ ತಾಂಡಾ ರಸ್ತೆ ಆಧುನೀಕರಣದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಗುಣಮಟ್ಟದಿಂದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ಬಿ. ಮುರಾರಿ, ಮುಖಂಡ ಸಿದ್ದನಗೌಡ ಮಾಟೂರು, ಮಲ್ಲಣ್ಣ ನಾಗರಬೆಂಚಿ, ಮಲ್ಲಯ್ಯ ಬಳ್ಳಾ, ಬಸ್ಸಪ್ಪ ಜಂಗಮರಹಳ್ಳಿ, ಕೃಷ್ಣ ಚಿಗರಿ, ಬಸನಗೌಡ ಮುದಬಾಳ, ಸುರೇಶ ಬ್ಯಾಳಿ, ಮಲ್ಲಯ್ಯ ನಾಗರಾಳ, ಚಾಂದ್ ಶೆಡಮಿ, ಶಿವು ಬ್ಯಾಳಿ, ಮಹಾಂತೇಶ ಮಾಟೂರು, ಮಹಾಂತೇಶ ಬ್ಯಾಳಿ, ಶಂಭು ಬ್ಯಾಳಿ, ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ಪತ್ರಿಕಾ ಭವನ ಪರಿಶೀಲನೆ

ಮಸ್ಕಿ ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಲಾಗುತ್ತಿರುವ ತಾಲ್ಲೂಕು ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಾಮಗಾರಿಯನ್ನು ಶಾಸಕ ಆರ್.ಬಸನಗೌಡ ಪರಿಶೀಲಿಸಿದರು.

ಭವನದ ಉಳಿದ ಕಾಮಗಾರಿಗೆ ಬೇಕಾದ ಅನುದಾನ ನೀಡಿ ಶೀಘ್ರ ಅದರ ಉದ್ಘಾಟನೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಮಸ್ಕಿ, ಕಾರ್ಯದರ್ಶಿ ಇಂದರ್ ಪಾಷಾ ಚಿಂಚರಕಿ, ಅಬ್ದುಲ್ ಅಜೀಜ್, ಮಲ್ಲಿಕಾರ್ಜುನ ಚಿಲ್ಕರಾಗಿ, ನಬೀ ಶೇಡಮಿ, ರೌವಿ ಗೌಡನಭಾವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT