ರಾಯಚೂರು: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಆದ ಬೆಳೆ ನಷ್ಟ ಪರಿಹಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ಹಾಗೂ ಭತ್ತಕ್ಕೆ ತಲಾ ₹ 3 ಸಾವಿರ, ಹತ್ತಿಗೆ ₹ 10 ಸಾವಿರ, ಈರುಳ್ಳಿಗೆ ₹ 3 ಸಾವಿರ, ತೊಗರಿಗೆ ₹ 10 ಸಾವಿರ ನಷ್ಟ ಪರಿಹಾರ ಕೊಡಬೇಕು. ರೈತರು ಬೆಳೆದ ಎಲ್ಲ ಬೆಳೆಗಳಿಗೆ ನಿಗದಿತ ಬೆಲೆ ನಿಗದಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಗ್ರಾಮಗಳ ಗ್ರಾಮಠಾಣೆ ನಕ್ಷೆಯನ್ನು ಮೀರಿ ಗ್ರಾಮಗಳು ವಿಸ್ತೀರ್ಣವಾಗಿವೆ. ರಾಜ್ಯ ಸರ್ಕಾರ ಹೊಸದಾಗಿ ಎಲ್ಲ ಹೊಸ ಗ್ರಾಮಠಾಣೆ ಸರ್ವೆ ಮಾಡಿ ಗ್ರಾಮಗಳ ಹೊಸ ನಕ್ಷೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕಿನ ಸರ್ವೆ ಇಲಾಖೆಯವರು ಹದ್ದುಬಸ್ತು ಸರ್ವೆ ಮಾಡಬೇಕು. ರೈತರ ಕಲಹಗಳು ಹಾಗೂ ಕಚೇರಿಗಳ ಅಲೆದಾಟವನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು

ಬೇಸಿಗೆಯಲ್ ರೈತರ ಟಿ.ಸಿ, ಸುಟ್ಟರೆ ಜೆಸ್ಕಾಂ ಅಧಿಕಾರಿಗಳು ತಕ್ಷಣ ಬೇರೆ ಟಿಸಿ ಒದಗಿಸಬೇಕು. 12 ತಾಸು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಿ.ಸಿ.ಐ ಹತ್ತಿ ಬೆಳೆದ ರೈತರಿಗೆ ಆನ್ ಲೈನ್ ಬುಕಿಂಗ್ ಆರಂಭಿಸಬೇಕು. ತರಕಾರಿ ಬೆಳೆಗಳಿಗೂ ನಿಗದಿತ ಬೆಲೆ ಘೋಷಿಸಬೇಕು ಎಂದು ಮನವಿ ಮಾಡಿದರು.

ರೈತರು ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೂಲಿ, ಭೂಮಿ ಹದಗೊಳಿಸಲು ಯಂತ್ರೋಪಕರಣಗಳ ಬಾಡಿಗೆ ಮತ್ತು ಬೆಳೆ ಬೆಳೆದ ಸರಕುಗಳನ್ನು ಮಾರಕಟ್ಟೆಗೆ ಕೊಂಡೊಯ್ಯಲು, ಮಾರುಕಟ್ಟೆಯಲ್ಲಿ ತೂಕದ ಯಂತ್ರಕ್ಕೆ ಶುಲ್ಕ ಹೀಗೆ ಹಲವು ವಿಧದಲ್ಲಿ ಹಣ ಖರ್ಚು ಮಾಡಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಂದು ಬೆಳೆ ನಷ್ಟ ಪರಿಹಾರ ಒದಗಿಸಬೇಕು. ಬೆಳೆ ವಿಮೆ ಪಾವತಿಸಿರುವ ರೈತರಿಗೆ ಕೂಡಲೆ ವರಿಹಾರ ನೀಡಬೇಕು. ಎಂದು ಹೇಳಿದರು.

ಜಿಲ್ಲಾಡಳಿತದಿಂದ ನಿರ್ಲಕ್ಷ:

ಎಪಿಎಂಸಿಯಲ್ಲಿ ತೂಕದ ಯಂತ್ರ ಅಳವಡಿಸಬೇಕು. ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡರು ಸಣ್ಣ ಸಮಸ್ಯೆಯನ್ನೂ ಸ್ಥಳೀಯ ಮಟ್ಟದಲ್ಲಿ ಬಗೆ ಹರಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ರೈತರು ಮಾರುಕಟ್ಟೆಗೆ ತರುವ ಹತ್ತಿಯನ್ನು ಹತ್ತಿಯ ವ್ಯಾಪಾರಸ್ಥರು ತೂಕದಲ್ಲಿ ಪ್ರತಿ ಕ್ವಿಂಟಲ್ ಒಂದು ಕೆ.ಜಿ. ಸೂಟ್ ಎಂದು ತೆಗೆಯುವುದನ್ನು ನಿಲ್ಲಿಸಬೇಕು. ರೈತರ ಸಮಸ್ಯೆಗಳಿಗೆ ಕಾನೂನುತಾತ್ಮಕವಾಗಿ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ನರಸಿಂಗರಾವ್ ಕುಲಕುರ್ಣಿ, ಜಿಲ್ಲಾ ಗೌರವ ಅಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗರದೊಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ನರಸಪ್ಪ ವಕ್ರಾಣಿ, ಕೆ.ವೀರೇಶಗೌಡ, ತಿಮ್ಮಪ್ಪ ಬಾಪೂರು, ಜೆ.ಹುಲಿಗಪ್ಪ ಜಾಲಿಬೆಂಚಿ, ರಮೇಶ ಗಣದಾಳ, ಇಬ್ರಾಹಿಂ, ಮೆಹಬೂಬ ನೆಲಹಾಳ ಪ್ರತಿಭಟೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.