ಜಿಲ್ಲೆಯಾದ್ಯಂತ ನಗರ, ಪಟ್ಟಣಗಳ ರಾಜ್ಯ ಹೆದ್ದಾರಿಯ ವಿಭಜಕಗಳ ಮೇಲೆ ಹಾಗೂ ಸರ್ಕಾರಿ ಇಲಾಖೆಗಳ ಆವರಣಗಳಲ್ಲಿ ಕೊನೊಕಾರ್ಪಸ್ ತಳಿಯ ಗಿಡಗಳನ್ನು ನೆಡಲಾಗಿದೆ. ಕೊನೊಕಾರ್ಪಸ್ ಗಿಡವು ವಿಷಕಾರಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದು, ಇದರ ಆಮ್ಲಜನಕವನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ ಹಾಗೂ ಹೃದಯಾಘಾತಕ್ಕೆ ಎಡೆಮಾಡಿಕೊಡುತ್ತದೆ. ಈ ಗಿಡಗಳ ಬೀಜಗಳು ನೆಲದ ಮೇಲೆ ಬಿದ್ದು ವೇಗವಾಗಿ ಬೆಳೆಯುತ್ತದೆ. ಗುಜರಾತ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಗಿಡಗಳನ್ನು ನೆಡಲು ನಿಷೇಧಿಸಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಕಚೇರಿ ಆವರಣಗಳಲ್ಲಿ ಈ ಗಿಡಗಳು ಯತೇಚ್ಛವಾಗಿ ಅರಣ್ಯ ಇಲಾಖೆಯಿಂದ ಬೆಳೆಸಲಾಗಿದೆ. ಕೊನೊಕಾರ್ಪಸ್ ತಳಿಯ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಯಿತು.