ಆರ್ಯವೈಶ್ಯ ಸಮಾಜದ ವತಿಯಿಂದ ಇಲ್ಲಿನ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ ಭಜನೆ ಹಾಡುಗಳೊಂದಿಗೆ ಗಣೇಶ ಮೂರ್ತಿಯನ್ನು ತಂದು ವಾಸವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಇಲ್ಲಿನ ಜಲಸಂಪನ್ಮೂಲ ಕಚೇರಿ ಆವರಣದಲ್ಲಿನ ಗಣೇಶ ದೇವಸ್ಥಾನ, ಎಸ್‌ಬಿಐ ಹಿಂದೆ ಉದಯನಗರದಲ್ಲಿ ಎಲ್‌ಬಿಕೆ ಹಿಂದೂ ಮಹಾಗಣಪತಿ, ದೈವದಕಟ್ಟೆ ಗಣಪತಿ, ತ್ರಯಂಭಕೇಶ್ವರ ದೇವಸ್ಥಾನದ ಹತ್ತಿರ, ಕಲ್ಮಠ ಕಲ್ಯಾಣ ಮಂಟಪ, ಸಂತೆ ಕಟ್ಟೆ ಹತ್ತಿರದ ಆಂಜನೇಯ ದೇವಸ್ಥಾನ ಮತ್ತು ಈರಣ್ಣ ಕಟ್ಟೆ ಹತ್ತಿರ ಸೇರಿದಂತೆ ವಿವಿಧೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮೂರು ಮತ್ತು ಐದು ದಿನಗಳ ವರೆಗೆ ವಿಘ್ನ ನಿವಾರಕನಿಗೆ ಪೂಜೆ ನಡೆಯುತ್ತದೆ.