ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬೀದಿ ನಾಯಿ ದಾಳಿಗೆ ಒಳಗಾಗಿದ್ದ ಬಾಲಕಿ ಸಾವು

Published 21 ಮೇ 2024, 14:27 IST
Last Updated 21 ಮೇ 2024, 14:27 IST
ಅಕ್ಷರ ಗಾತ್ರ

ರಾಯಚೂರು: ಬೀದಿನಾಯಿಗಳ ದಾಳಿಗೆ ಒಳಗಾಗಿದ್ದ ರಾಯಚೂರು ತಾಲ್ಲೂಕಿನ ಕೊರ್ವಿಹಾಳ ಗ್ರಾಮದ 4 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಕೆಲ ದಿನಗಳ ಹಿಂದೆ ಕೊರ್ವಿಹಾಳ ಗ್ರಾಮದಲ್ಲಿ ಬಾಲಕಿ ಲಾವಣ್ಯ ಬೀದಿ ನಾಯಿ ದಾಳಿಗೆ ಒಳಗಾಗಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಳು ಆದರೆ ಶನಿವಾರ ಏಕಾಏಕಿ ಮೃತಪಟ್ಟಿದ್ದಾಳೆ. 

ಮನೆಯ ಮುಂದೆ ಆಟವಾಡುತ್ತಿದ್ದ 7 ಮಕ್ಕಳ ಮೇಲೆ ಬೀದಿನಾಯಿ ದಾಳಿ ಮಾಡಿ ಗಾಯಗೊಳಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಎಲ್ಲಾ ಮಕ್ಕಳು ಬಿಡುಗಡೆಯಾಗಿದ್ದರು. ಲಾವಣ್ಯ ಸಾವಿನಿಂದ ನಾಯಿ ದಾಳಿಗೆ ಒಳಗಾದ ಉಳಿದ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT