ಶನಿವಾರ, ಏಪ್ರಿಲ್ 1, 2023
23 °C

‘ಹಸಿರು ಲಿಂಗಸುಗೂರು’ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ಹಸಿರು ಲಿಂಗಸುಗೂರು’ ಸಮಿತಿ ಸದಸ್ಯರಿಂದ ಸ್ಥಳೀಯ ಬಸ್‍ ನಿಲ್ದಾಣ ಆವರಣದಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮ ಮೂಲಕ ಪ್ರಯಾಣಿಕರಲ್ಲಿ ಪರಿಸರ ಜಾಗೃತಿ ಅಭಿಯಾನ ನಡೆಸಲಾಯಿತು.

ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಮಾತನಾಡಿ, ‘ಯುವಕರು ಸಮಿತಿ ರಚಿಸಿಕೊಂಡು ತಾಲ್ಲೂಕು ಕೇಂದ್ರದ ಪ್ರಮುಖ ಸ್ಥಳಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವುದು ಖುಷಿ ತಂದಿದೆ’ ಎಂದರು.

ಸಮಿತಿ ಹಿರಿಯ ಸದಸ್ಯ ಪ್ರಭುಸ್ವಾಮಿ ಅತ್ನೂರು ಮಾತನಾಡಿ, ‘ಹಸಿರು ಲಿಂಗಸುಗೂರು ಸಮಿತಿ ಸದಸ್ಯರು ಆರಂಭಿಕ ಹಂತವಾಗಿ 500 ಸಸಿಗಳನ್ನು ನೆಡುವ ಜೊತೆಗೆ ಅವುಗಳ ರಕ್ಷಣೆಗೆ ಮುಂದಾಗಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ಮುಖಂಡರಾದ ಭೀಮಶೇನ ಜೋಷಿ, ಸಂಜಯ ಹಿರೇಮಠ, ಮಲ್ಲಣ್ಣ ಕೆಂಭಾವಿ, ಚೆನ್ನಬಸವ ಹಿರೇಮಠ, ಅಮರೇಶ ಗಂಭೀರಮಠ, ಮಹಾಂತೇಶ ನರಕಲದಿನ್ನಿ, ಸುರೇಶ ಮೇಟಿ, ಆರ್‍.ಎಸ್‍ ಪಾಟೀಲ, ಮದನಮೋಹನ, ಸುಗೂರೇಶ ಸಾಲ್ಮನಿ, ಚೇತನ ಗುತ್ತೆದಾರ, ಕುಮಾರ ಭೋವಿ, ಚೇತನ, ಸಾರಿಗೆ ಸಂಸ್ಥೆ ನೌಕರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು