ಮಂಗಳವಾರ, ಜೂನ್ 28, 2022
21 °C

ಮಲ್ಲಮ್ಮನ ಆದರ್ಶ ಮಕ್ಕಳಿಗೆ ತಿಳಿಸಿ: ಮುರಘೇಂದ್ರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಟ್ಟಿಚಿನ್ನದಗಣಿ: ಮಹಿಳೆಯರು ಮಕ್ಕಳಿಗೆ ಸಂಸ್ಕೃತಿಯ ಜತೆಗೆ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳನ್ನು ತಿಳಿಸಬೇಕು ಎಂದು ಸಿದ್ಧರಾಮೇಶ್ವರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು.

ಬಸವಸೇವಾ ಸಮಿತಿ ಹಾಗೂ ಹೇಮರಡ್ಡಿ ಮಲ್ಲಮ್ಮ ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಈಚೆಗೆ ನಡೆದ  ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಂಪ್ಯೂಟರ್ ಯುಗದಲ್ಲಿ ದೇವಸ್ಧಾನದ ಬದಲು ಶಾಲೆ ಕಟ್ಟಿಸಿ, ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ. ಇದು ಸಮಾಜಕ್ಕೆ ಮಾದರಿಯಾಗಲಿದೆ ಎಂದರು.

ದೇವರಭೂಪೂರ ಕ್ಷೇತ್ರದ ಅಭಿನವಗಜ ದಂಡ ಸ್ವಾಮೀಜಿ ಮಾತ ನಾಡಿ, ಯುವಕರು ದುಶ್ಚಟಗಳಿಗೆ ಬಲಿ ಯಾಗದೆ ಶಿಕ್ಷಿತರಾಗಿ. ಹಿರಿಯರ ಆದರ್ಶ ಗಳನ್ನು ಪಾಲಿಸಿ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಶರಣು ಗೌಡ ಪಾಟೀಲ ಬಯ್ಯಾಪೂರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಮ್ಮ ಜೇರಬಂಡಿ, ಮಲ್ಲಿಕಾರ್ಜುನ, ವಿಜಯಕುಮಾರ ಸಾಹುಕಾರ, ಶಂಕರಗೌಡ ಬಳಾಗಾ ನೂರು, ನಿಂಗನಗೌಡ, ದೇವಪ್ಪ, ಕಾರ್ಮಿಕ ಸಂಘದ ಅಧ್ಯಕ್ಷ ಎಂ. ಶಫಿ, ನಾಗರೆಡ್ಡಿ ಜೇರಬಂಡಿ, ಸಿದ್ದಪ್ಪ ಮುಂಡರಗಿ, ಸೋಮಣ್ಣ ನಾಯಕ, ಮಂಜುನಾಥ, ರೋಡಲಬಂಡ, ಅಮರೇಗೌಡ ಇಚನಾಳ, ನಾಗರಡ್ಡಿಪ್ಪ, ವಿರಪಾಕ್ಷ ನೀಲೋಗಲ್, ಮಲ್ಲನಗೌಡ ರೋಡಲಬಂಡ, ವಿರೇಶ, ಸುರೇಶ ಪಾಣಿ, ಮೇಧಿನಾಪೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು