ಸೋಮವಾರ, ಮಾರ್ಚ್ 30, 2020
19 °C

ರಾಯಚೂರು: ಕಾಶಿ ಯಾತ್ರೆಗೆ ಹೋಗಿ ಮರಳಿದವರಿಗೆ ‘ಹೋಮ್ ಕ್ವಾರಂಟೈನ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತಾಲ್ಲೂಕಿನ ಸಗಮಕುಂಟಾ ಗ್ರಾಮದಿಂದ ಕಾಶಿ ಯಾತ್ರೆಗಾಗಿ ತೆರಳಿ, ಬುಧವಾರ ಮರಳಿದ 16 ಜನರನ್ನು 'ಹೋಮ್ ಕ್ವಾರಂಟೈನ್' ಮಾಡಲಾಗಿದೆ.

ಆರೋಗ್ಯ ಇಲಾಖೆಯ ನಿಯೋಜಿತ ಸಿಬ್ಬಂದಿಯು ಎಲ್ಲರ ಆರೋಗ್ಯ ತಪಾಸಣೆ ನಡೆಸಿದರು. ಕೈ ಮಣಿಕಟ್ಟಿನ ಮೇಲೆ ಸೀಲ್ ಹಾಕಿದ್ದು, ಮುಂದೆ ಸೂಚನೆ ಕೊಡುವವರೆಗೂ ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಬರದಂತೆ ತಿಳಿಸಿದ್ದಾರೆ.

ಗೋಡೆಗೆ ಭಿತ್ತಿಪತ್ರ: ಹೋಮ್ ಕ್ವಾರಂಟೈನ್ ಇರಬೇಕು ಎಂದು ಕೈ ಮೇಲೆ ಸೀಲ್ ಹಾಕಲಾಗಿರುವವರು ವಾಸಿಸುವ ಮನೆ ಗೋಡೆ ಮೇಲೆ ಆರೋಗ್ಯ ಇಲಾಖೆಯ ಸಿಬ್ಬಂದಿ ಬುಧವಾರ ಭಿತ್ತಿಪತ್ರ ಅಂಟಿಸಿದರು.

ಜಿಲ್ಲೆಯಲ್ಲಿ ಇದುವರೆಗೂ 148 ಜನರು ವಿದೇಶಗಳಿಂದ ಮರಳಿದ್ದು, 625 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು