ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿಕೆ

ಬಿಜೆಪಿಗೆ ದ್ರೋಹ ಬಗೆಯಲಾರೆ; ಮಾನಪ್ಪ ವಜ್ಜಲ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ತಮ್ಮ ರಾಜಕೀಯ ಜೀವನದಲ್ಲಿ ವಿಧಾನಸಭೆ ಪ್ರವೇಶಕ್ಕೆ ವೇದಿಕೆ ಆಗಿರುವ ಲಿಂಗಸುಗೂರು ಕ್ಷೇತ್ರ ಬಿಟ್ಟು ಅನ್ಯ ಕ್ಷೇತ್ರದತ್ತ ಮುಖ ಮಾಡುವ ಪ್ರಶ್ನೆಯೇ ಉದ್ಭವಿಸದು. ಅದರಲ್ಲೂ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಟಿಕೆಟ್‍ ನೀಡಿದ ಭಾರತೀಯ ಜನತಾ ಪಕ್ಷ ತೊರೆದು ದ್ರೋಹ ಬಗೆಯಲಾರೆ’ ಎಂದು ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಹೇಳಿದರು.

ಭಾನುವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುಣಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಈ ಕ್ಷೇತ್ರದಲ್ಲಿಯೇ ನಾನು, ನಮ್ಮ ಕುಟುಂಬಸ್ಥರು ಜೀವ ಇರುವವರೆಗೆ ಶ್ರಮಿಸುತ್ತೇವೆ. ಕ್ಷೇತ್ರದ ಅಭಿವೃದ್ಧಿ ತಮ್ಮ ಗುರಿ. ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳ ಸ್ಥಾಪನೆ ಮಾಡುವ ಕನಸು ಕಂಡಿರುವೆ. ಸರ್ಕಾರ ತಮ್ಮದು ಅಸ್ಥಿತ್ವಕ್ಕೆ ಬಂದಾಗ ತಾವು ಸೋತಿರುವುದು ಹಿನ್ನಡೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪೂರ್ವಭಾವಿ ಸಭೆ ಉದ್ಘಾಟಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮಾನಂದ ಯಾದವ ಮಾತನಾಡಿ, ‘ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿ ಯಾರೆ ಆಗಿರಲಿ, ಅವರ ಗೆಲುವಿಗೆ ಶ್ರಮಿಸಬೇಕು. ಸ್ಥಳೀಯ ಶಾಸಕರು ವಜ್ಜಲರೊ, ಹೂಲಗೇರಿಯೊ ಎಂಬ ಕುರಿತು ಕ್ಷೇತ್ರದಲ್ಲಿ ಚರ್ಚೆಯಾಗುತ್ತಿದೆ. ವಜ್ಜಲ ಅವರ ಕ್ರಿಯಾಶೀಲ ರಾಜಕೀಯ ಚಟುವಟಿಕೆ ಜನರಲ್ಲಿ ಆತಂಕ ಸೃಷ್ಟಿಸಿದೆ’ ಎಂದು ವಜ್ಜಲರ ಕೆಲಸ ಕಾರ್ಯ ಶ್ಲಾಘಿಸಿದರು.

ತಾಲ್ಲೂಕು ಘಟಕ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ಡಾ. ಶಿವಸಬಪ್ಪ ಹೆಸರೂರು, ಬಾಬಣ್ಣ ಆನ್ವರಿ, ಡಿ.ಜಿ ಗುರಿಕಾರ, ಕಂಠೆಪ್ಪಗೌಡ ಖೈರವಾಡಗಿ, ಜಗನ್ನಾಥ ಕುಲಕರ್ಣಿ ಮಾತನಾಡಿದರು.

ಶುಭಾಶಯಗಳು: ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ ಅವರ 58ನೇ ಜನ್ಮ ದಿನ ನಿಮಿತ್ತ ಕ್ಷೇತ್ರದ ಕಾರ್ಯಕರ್ತರ ಪರವಾಗಿ ಸತ್ಕರಿಸಿ ಶುಭಾಶಯ ಹಂಚಿಕೊಳ್ಳಲಾಯಿತು. ವಿವಿಧ ಘಟಕ, ಗ್ರಾಮಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ವಜ್ಜಲ ಅವರನ್ನು ಸನ್ಮಾನಿಸಿ ಶುಭಾಶಯ ಹಂಚಿಕೊಂಡರು.

ಮುಖಂಡರಾದ ಹನುಮಂತಪ್ಪ ತೊಗರಿ, ಜೂವಲೆಪ್ಪ ನಾಯ್ಕ, ರುದ್ರಗೌಡ ಪಾಟೀಲ, ಗುಂಡಪ್ಪಗೌಡ ಗುರಿಕಾರ, ನಾರಾಯಣಪ್ಪ ನಾಯ್ಕ, ಸಿದ್ದಯ್ಯಸ್ವಾಮಿ ಮ್ಯಾಗಳಪೇಟೆ, ಗಿರಿಮಲ್ಲನಗೌಡ ಪಾಟೀಲ್‍, ನಾಗಪ್ಪ ವಜ್ಜಲ, ಮಹಾಂತಗೌಡ ಬಯ್ಯಾಪುರ, ಅಯ್ಯಪ್ಪ ಮಾಳೂರು, ಬಸಮ್ಮ ಯಾದವ, ಶೋಭಾ ಕಾಟವೆ, ಜಯಶ್ರೀ ಸಕ್ರಿ, ಸಿದ್ಧಯ್ಯಸ್ವಾಮಿ ತಲೆಕಟ್‍, ಮಲ್ಲರೆಡ್ಡೆಪ್ಪ ಜಕ್ಕೇರಮಡು, ಬಸನಗೌಡ ಚಿತ್ತಾಪುರ, ಶಂಕರಗೌಡ ಬಳಗಾನೂರ.

ವೆಂಕನಗೌಡ ಪಾಟೀಲ, ಶರಣಪ್ಪ ನಿಲೋಗಲ್‍, ರಾಜಾ ನರಸಿಂಹ ನಾಯಕ, ರಾಮನಗೌಡ ಪಾಟೀಲ್‍, ಲಿಂಗನಗೌಡ ನಾಗರಹಾಳ, ವಿರುಪಾಕ್ಷಪ್ಪ ಹಂದ್ರಾಳ, ಡಾ. ನಾಗಪ್ಪ ಸೂಗೂರು, ನಾಗನಗೌಡ, ಮಾರೆಪ್ಪ, ದ್ಯಾಮಣ್ಣ ನಾಯಕ, ಗೋವಿಂದ ನಾಯಕ, ಮುದಕಪ್ಪ ನಾಯಕ, ಹುಲ್ಲೇಶ ಕಾಚಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು