ಮಸ್ಕಿ: ನ.1 ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತಾಲ್ಲೂಕು ಆಡಳಿತ ಹಾಗೂ ಪುರಸಭೆ ಸಜ್ಜಾಗಿದೆ.

ಪಟ್ಟಣದ ಪ್ರಮುಖ ಬೀದಿಗಳು ಈಗಾಗಲೇ ಹಬ್ಬದ ವಾತಾವರಣಕ್ಕೆ ತೊಡಗಿಕೊಂಡಿದ್ದು, ಬಸವೇಶ್ವರ ವೃತ್ತದಿಂದ ಅಶೋಕ ವೃತ್ತದವರೆಗೆ ಕನ್ನಡದ ಬಾವುಟಗಳು, ಬ್ಯಾನರ್ಗಳಿಂದ ಸಿಂಗಾರಗೊಂಡಿವೆ. ಎಲ್ಲೆಡೆ ಕೆಂಪು-ಹಳದಿ ಬಣ್ಣದ ರಂಗಿನ ಅಲಂಕಾರ ಕಂಗೊಳಿಸುತ್ತಿದೆ.

ರಾಜ್ಯೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ, ಕನ್ನಡಾಂಬೆಯ ಮೆರವಣಿಗೆಗೆ ತಯಾರಿಗಳು ಜೋರಾಗಿವೆ. ತಹಶೀಲ್ದಾರ್ ಮಂಜುನಾಥ ಬೋಗಾವತಿ ಹಾಗೂ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ನೇತೃತ್ವದಲ್ಲಿ ಬೀದಿಗಳ ಸ್ವಚ್ಛತೆ, ವಿದ್ಯುತ್ ಅಲಂಕಾರ, ವೇದಿಕೆ ಸಿದ್ಧತೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ನಗರದ ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ಹಾಗೂ ಕನ್ನಡಪರ ಸಂಘಟನೆಗಳು ಜನರಲ್ಲಿ ಕನ್ನಡ ಧ್ವಜ ಹಾರಿಸಲು ಕರೆ ನೀಡಿವೆ. ಮಸ್ಕಿ ಪಟ್ಟಣ ಸದ್ಯ ಕನ್ನಡ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದು, ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಕಾಣಿಸುತ್ತಿದ್ದ ಮೆರವಣಿಗೆಯಲ್ಲಿ ಕನ್ನಡಪರ ಸಂಘಟನೆಗಳು, ಅಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಹಶೀಲ್ದಾರ್ ಮಂಜುನಾಥ ಬೋಗಾವತಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.