ಕವಿತಾಳ: ಬಸವಲಿಂಗ ದೇಶೀಕೇಂದ್ರ ಮಹಾ ಶಿವಯೋಗಿಗಳ 161ನೇ ಹಾಗೂ ಮರಿಬಸವಲಿಂಗ ದೇಶೀಕೇಂದ್ರ ಸ್ವಾಮೀಜಿಯ 35ನೇ ಪುಣ್ಯಸ್ಮರಣೆ ಅಂಗವಾಗಿ ಸಮೀಪದ ಉಟಕನೂರು ಗ್ರಾಮದಲ್ಲಿ ಜ.11 ರಂದು ಜರುಗುವ ಅಡವಿ ಸಿದ್ದೇಶ್ವರ ಮಠದ 35ನೇ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.

ನೂತನವಾಗಿ ನಿರ್ಮಿಸಿದ ಬೃಹತ್ ಗಾತ್ರದ ರಥ ಈ ವರ್ಷದ ಮಹಾ ರಥೋತ್ಸವಕ್ಕೆ ಮೆರಗು ತರಲಿದೆ, ಜ.10 ರಂದು ಬಸವಲಿಂಗ ಶಿವಯೋಗಿಗಳ ಪುರಾಣ ಪ್ರವಚನ ಮಹಾಮಂಗಲ, ಮರಿಬಸವಲಿಂಗ ಸ್ವಾಮೀಜಿ ಚರಿತ್ರೆ ಲೋಕಾರ್ಪಣೆ, ಅಲಂಕೃತ ಜೋಡೆತ್ತುಗಳ ಮೆರವಣಿಗೆ, ರೈತರಿಗೆ ಸನ್ಮಾನ ನಡೆಯಲಿದೆ.

ಜ.11 ರಂದು ಅಗಣಿತ ಲೀಲಾ ಮೂರ್ತಿ ಗ್ರಂಥದ ಅಂಬಾರಿ ಮೆರವಣಿಗೆ, ಬೆಳಿಗ್ಗೆ 10 ಗಂಟೆಗೆ ಮಹಿಳೆಯರಿಂದ ಹೂವಿನ ರಥೋತ್ಸವ ಹಾಗೂ ಸಂಜೆ ನೂತನ ಮಹಾ ರಥೋತ್ಸವ ಜರುಗುವುದು ಈ ವರ್ಷದ ವಿಶೇಷ.

ಕತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆ, ನೂತನ ರಥೋತ್ಸವದ ಕಳಸಾರೋಹಣ, ಜಂಗಮ ಗಣಾರಾಧನೆ, ದಾಸೋಹ, ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗುತ್ತದೆ.

ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣದಲ್ಲಿ ಉಳಿತಾಯ ಮಾಡಿ ಅಂದಾಜು ₹10 ಲಕ್ಷ ಮೊತ್ತದ ಬೆಳ್ಳಿ ಕಳಸವನ್ನು ದೇಣಿಗೆ ನೀಡಿದ್ದಾರೆ
ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಉಟಕನೂರು

ಮರಿಬಸವಲಿಂಗ ಸ್ವಾಮೀಜಿಗಳು ಪವಾಡ ಪುರುಷರಾಗಿ ಭಕ್ತರ ಮನದಲ್ಲಿ ಸದಾ ನೆಲೆಸಿದ್ದಾರೆ ಶ್ರೀಮಠದ ಕೃಪೆಯಿಂದ ನೆಮ್ಮದಿ ಬದುಕು ನಮ್ಮದಾಗಿದೆ
ಶರಣು ಸಾಹುಕಾರ ಚಿಂಚಿರಿಕಿ ಉದ್ಯಮಿ ಕಾಂಗ್ರೆಸ್ ಮುಖಂಡ

ವಿವಿಧ ಮಠಾಧೀಶರು ಭಾಗಿ

ಮಠದ ಪೀಠಾಧಿಪತಿ ಮರಿಬಸವರಾಜ ದೇಶೀಕೇಂದ್ರ ಶಿವಾಚಾರ್ಯರ ಉಪಸ್ಥಿತಿಯಲ್ಲಿ ನಡೆಯುವ ರಥೋತ್ಸವದಲ್ಲಿ ಬಿಚ್ಚಾಲಿ ಬೃಹನ್ಮಠದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ನಿಲೋಗಲ್ ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ವಳ ಬಳ್ಳಾರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಬಳಗಾನೂರು ಹಳೆಕೋಟಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ದೇವದುರ್ಗ ಶಿಖರಮಠದ ಕಪಿಲ ಸಿದ್ದರಾಮೇಶ್ವರ ಸ್ವಾಮೀಜಿ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಚನ್ನಮಲ್ಲ ಸ್ವಾಮೀಜಿ ಗುರುಬಸವ ಸ್ವಾಮಿ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಮಹಾಲಿಂಗ ಸ್ವಾಮೀಜಿ ತೋಂಟದಾರ್ಯ ಸ್ವಾಮೀಜಿ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸದಾಶಿವ ಸ್ವಾಮೀಜಿ ವರರುದ್ರಮುನಿ ಸ್ವಾಮೀಜಿ ಅಭಿವನ ಸಿದ್ದಲಿಂಗ ಸ್ವಾಮೀಜಿ ವೀರಭದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.