ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾನದಿ ಪ್ರವಾಹ: ಶೀಲಹಳ್ಳಿ ಸೇತುವೆ ಮುಳುಗಡೆ

Last Updated 7 ಆಗಸ್ಟ್ 2020, 5:59 IST
ಅಕ್ಷರ ಗಾತ್ರ

ರಾಯಚೂರು: ನಾರಾಯಣಪುರ ಜಲಾಶಯದಿಂದ 1.83 ಲಕ್ಷ ಕ್ಯುಸೆಕ್ ಅಡಿ ನೀರು ಹರಿದು ಬರುತ್ತಿದ್ದು, ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆ ಗ್ರಾಮ ಸಂಪರ್ಕಿಸುವ ಶೀಲಹಳ್ಳಿ ಸೇತುವೆ ಪ್ರವಾಹದಲ್ಲಿ ಮುಳುಗಡೆ ಆಗಿದೆ.

ಯಳಗುಂದಿ, ಹಂಚಿನಾಳ, ಯರಗೋಡ ಹಾಗೂ ಕಡದರಗಡ್ಡಿ ಗ್ರಾಮಗಳಿಗೂ ಲಿಂಗಸುಗೂರಿಗೆ ತೆರಳುವ ಸುಲಭ ಮಾರ್ಗ ಸ್ಥಗಿತವಾಗಿದೆ. ಈ ಗ್ರಾಮಗಳ ಜನರು ಜಲದುರ್ಗ ಮಾರ್ಗವಾಗಿ 20 ಕಿಲೋಮೀಟರ್ ಹೆಚ್ಚುವರಿ ಸಂಚರಿಸಿ ಲಿಂಗಸುಗೂರಿಗೆ ತಲುಪಬೇಕಿದೆ.

ಪ್ರವಾಹವು 5 ಲಕ್ಷ ಕ್ಯುಸೆಕ್ ಅಡಿ ದಾಟಿದರೆ ಜಲದುರ್ಗ ಸೇತುವೆ ಮುಳುಗಡೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT