ಶುಕ್ರವಾರ, ಜುಲೈ 30, 2021
24 °C

ರಾಯಚೂರಿನಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಿಂದ ಕೆಲವು ಮಾರ್ಗಗಳಿಗೆ ಸರ್ಕಾರಿ ಬಸ್ ಗಳ ಸಂಚಾರವು ಸೋಮವಾರದಿಂದ ಆರಂಭವಾಗಿದೆ.

ಹೈದರಾಬಾದ್, ಗಂಗಾವತಿ, ಗದ್ವಾಲ್, ಕಲಬುರ್ಗಿ ಮಾರ್ಗಗಳಿಗೆ ಒಟ್ಟು 12 ಬಸ್ ಗಳು ತೆರಳಿದವು. ಮಂತ್ರಾಲಯ ಸೇರಿ ಇನ್ನಷ್ಟು ಮಾರ್ಗಕ್ಕೂ ಬಸ್ ಗಳು ಸಂಚರಿಸಲಿವೆ ಎಂದು ನಿಲ್ದಾಣದ ನಿಯಂತ್ರಕ ದೇವರೆಡ್ಡಿ ತಿಳಿಸಿದರು.

ಬಸ್ ಚಾಲಕರು ಹಾಗೂ ನಿರ್ವಾಹಕರು ಗ್ರಾಮೀಣ ಭಾಗಗಳಿಂದ ಬರಬೇಕಿದ್ದು, ಫೋನ್ ಮಾಡಿ ಕರೆಸುತ್ತಿದ್ದೇವೆ. ಐಟಿಪಿಸಿಆರ್ ತಪಾಸಣೆ ಮಾಡಿಕೊಂಡವರು ಹಾಗೂ ಲಸಿಕೆ ಪಡೆದವರಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಲಾಗುತ್ತಿದೆ ಎಂದರು.

ವಿವಿಧ ಊರುಗಳಿಗೆ ತೆರಳಲು ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರುತ್ತಿದ್ದಾರೆ. ಒಟ್ಟಾರೆ ಜನಜೀವನ ಸಹಜತೆಯತ್ತ ಮರಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು