ಶನಿವಾರ, ಏಪ್ರಿಲ್ 17, 2021
23 °C

ರಾಯಚೂರು: ಬಿಕೋ‌ ಎನ್ನುತ್ತಿರುವ ಬಸ್ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pv photo

ರಾಯಚೂರು: ನಿತ್ಯ ಜನಜಂಗುಳಿ, ಬಸ್ ಓಡಾಟದಿಂದ ಕೂಡಿರುತ್ತಿದ್ದ ಕೇಂದ್ರ ಬಸ್ ನಿಲ್ದಾಣವು ಬಿಕೋ ಎನ್ನುತ್ತಿದೆ. ಜಿಲ್ಲೆಯ ಎಲ್ಲ ಏಳು ಡಿಪೋಗಳಲ್ಲಿಯೂ ಇದೇ ಸ್ಥಿತಿ ಇದೆ. ಚಾಲಕರು ಮತ್ತು‌ ನಿರ್ವಾಹಕರು ಬಸ್ ನಿಲ್ದಾಣದತ್ತ ಸುಳಿಯುತ್ತಿಲ್ಲ.

ರಾಯಚೂರು ಬಸ್ ನಿಲ್ದಾಣದ ಮುಂಭಾಗ ಕ್ರೂಸರ್, ಜೀಪ್ ಹಾಗೂ ಆಟೋಗಳಲ್ಲಿ ಪ್ರಯಾಣಿಕರು ವಿವಿಧೆಡೆ ತೆರಳುತ್ತಿದ್ದಾರೆ.

'ಚಾಲಕರು ಮತ್ತು ನಿರ್ವಾಹಕರ‌ ಮನವೊಲಿಸಿ ಕೆಲಸ ನಿರ್ವಹಿಸಲು ಕರೆಯುತ್ತಿದ್ದೇವೆ. ಕೆಲವರು ಬರುವುದಕ್ಕೆ‌ ಒಪ್ಪಿಕೊಂಡಿದ್ದಾರೆ. ಇವತ್ತು ಸಂಜೆ ವೇಳೆಗೆ ಕೆಲವರು ಬರಬಹುದಾಗಿದ್ದು, ಪ್ರಮುಖ ಮಾರ್ಗಗಳಲ್ಲಿ ಬಸ್ ಆರಂಭಿಸುತ್ತೇವೆ' ಎಂದು ಎನ್ ಇಕೆಆರ್ ಟಿಸಿ ರಾಯಚೂರು ವಿಭಾಗೀಯ ನಿಯಂತ್ರಕ ವೆಂಕಟೇಶ ತಿಳಿಸಿದರು.

ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದ‌ ಸರ್ಕಾರಿ ಬಸ್ ಗಳು ಬರುತ್ತಿದ್ದು, ಕರ್ನೂಲ್, ಮಂತ್ರಾಲಯ, ಗದ್ವಾಲ್‌, ಮೆಹಬೂಬನಗರ್ ಕಡೆಗೆ ಬೆರಳೆಣಿಕೆಯಷ್ಟು ಪ್ರಯಾಣಿಕರು ಸಂಚರಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು