ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗೆ ಪ್ರೋತ್ಸಾಹಿಸಲು ಎಲ್‌ಐಸಿ ಮುಂಚೂಣಿ

ವಲಯಮಟ್ಟದ ಚೆಸ್, ಕೇರಂ ಪಂದ್ಯಾವಳಿಯಲ್ಲಿ ಪ್ರಬಂಧಕ ವೈ.ವೆಂಕಟೇಶ್ವರಲು ಹೇಳಿಕೆ
Last Updated 6 ಆಗಸ್ಟ್ 2019, 13:15 IST
ಅಕ್ಷರ ಗಾತ್ರ

ರಾಯಚೂರು: ಕ್ರೀಡಾ ಚಟುವಟಿಕೆಗಳಿಗೆ ಜೀವ ವಿಮಾ ನಿಗಮ (ಎಲ್‌ಐಸಿ) ಪ್ರೋತ್ಸಾಹ ನೀಡುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದು, ವಿಶ್ವಮಟ್ಟದ ಚಾಂಪಿಯನ್‌ಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಆಟಗಾರರಿಗೆ ಸ್ಪೂರ್ತಿಯಾಗಲಿದೆ ಎಂದು ನಿಗಮದ ದಕ್ಷಿಣ ಮಧ್ಯ ವಲಯದ ಮಾನವ ಸಂಪನ್ಮೂಲ ವಿಭಾಗದ ಪ್ರಬಂಧಕ ವೈ.ವೆಂಕಟೇಶ್ವರಲು ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಎರಡು ದಿನಗಳ ಭಾರತೀಯ ಜೀವ ವಿಮಾ ನಿಗಮದ ವಲಯ ಮಟ್ಟದ ಚೆಸ್ ಮತ್ತು ಕೇರಂ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಚದುರಂಗ ಆಟ ಭಾರತದ ಪ್ರಾಚೀನ ಆಟವಾಗಿದ್ದು, ಅತ್ತುತ್ತಮ ಸಾಧನೆ ಮಾಡಿದ ಆಟಗಾರರು ಎಲ್‌ಐಸಿಯಲ್ಲಿದ್ದಾರೆ. ಎಲ್‌ಐಸಿ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಆಟಗಾರರಾದ ಅಪೂರ್ವ ಹಾಗೂ ನಿರ್ಮಲಾ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ರಾಯಚೂರು ವಿಭಾಗದ ಹಿರಿಯ ಪ್ರಬಂಧಕ ಕೆ.ಆರ್.ವೆಂಕಟೇಶ ಪ್ರಸಾದ ಮಾತನಾಡಿ, ಕರ್ನಾಟಕ, ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ 17 ವಿಭಾಗಗಳಿಂದ 76 ಆಟಗಾರರು ಪಾಲ್ಗೊಂಡಿದ್ದು, ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ರಾಯಚೂರು ವಿಭಾಗಕ್ಕೆ ಪಂದ್ಯಾವಳಿ ಆಯೋಜನೆ ಅವಕಾಶ ಸಿಕ್ಕಿರುವುದು, ವಿಭಾಗದ ಹಿರಿಮೆಯಾಗಿದೆ ಎಂದು ತಿಳಿಸಿದರು.

ರಾಯಚೂರು ವಿಭಾಗದ ಮಾರುಕಟ್ಟೆ ಪ್ರಬಂಧಕ ಸುಬ್ರಮಣ್ಯಂ, ಪ್ರಬಂಧಕ ಹರಿದಾಸ, ಕ್ರೀಡಾ ಅಭಿವೃದ್ಧಿ ಮಂಡಳಿಯ ವಲಯಮಟ್ಟದ ಸದಸ್ಯರಾದ ನಾಗೇಂದ್ರ ಪ್ರಸಾದ, ಜೆ.ಡಿ.ಕಾಮಟೆ, ಕಿಶೋರ ಕುಮಾರ, ಅಂಬೇಕರ್ ಇದ್ದರು. ಎ.ಶ್ರೀಧರ ವಂದಿಸಿದರು. ವೀರಭದ್ರಪ್ಪ ನಿರೂಪಿಸಿದರು.

ಆಯ್ಕೆ:ಕೇರಂ ಮಹಿಳಾ ವಿಭಾಗದಲ್ಲಿ ಹೈದರಾಬಾದ್‌ನ ಅಪೂರ್ವ, ನಿರ್ಮಲಾ, ಧಾರವಾಡದ ವಿ.ಕೆ.ಕಾಗಿನೆಲಿ, ಶಿವಮೊಗ್ಗದ ಎ.ವಿ.ಮಮತಾ, ಪುರುಷರ ವಿಭಾಗದಲ್ಲಿ ಹೈದರಾಬಾದ್‌ನ ವೀರಲಿಂಗಮ್, ಧಾರವಾಡದ ಕೆ.ಓ.ಕೊಂಕಟ್, ರಾಜಮಂಡ್ರಿಯ ಪಿ.ವಿ.ಪ್ರಸಾದ ಮತ್ತು ಹೈದರಾಬಾದ್‌ನ ಕೆ.ರಘುನಾಥ ರಾವ ಕ್ವಾರ್ಟರ್ ಫೈನಲ್‌ಗೆ ಆಯ್ಕೆಯಾಗಿದ್ದಾರೆ.

ಚೆಸ್‌ ಮಹಿಳಾ ವಿಭಾಗದಲ್ಲಿ ಕರೀಂನಗರದ ಬಿ.ರೇಣುಕಾ ಕುಮಾರಿ, ಮಚಲಿಪಟ್ಟಣಮ್ ಸಿ.ರಾಧಿಕಾ ದೇವಿ, ರಾಜಮಂಡ್ರಿಯ ವಿ.ರಾಧಾಕುಮಾರಿ, ಮೈಸೂರಿನ ನಾಗರತ್ನ ಹಾಗೂ ಪುರುಷರ ವಿಭಾಗದಲ್ಲಿ ಮೈಸೂರಿನ ನಾರಾಯಣ ಭಟ್, ಕರೀಂನಗರದ ಮಹೇಂದ್ರಕುಮಾರ, ಮಚಲಿಪಟ್ಟಣಮ್‌ ವಿ.ಶ್ರೀನಿವಾಸುಲು ಮತ್ತು ಮೈಸೂರಿನ ರವಿಪ್ರಕಾಶ ಎರಡು ಅಂಕಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT