ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಯಚೂರು ಜಿಲ್ಲೆಯಲ್ಲಿ 19.93 ಲಕ್ಷ ಮತದಾರರು

ಮೇ 7ರಂದು ಲೋಕಸಭೆ ಚುನಾವಣೆ: ಸಿದ್ಧತೆ ಪೂರ್ಣ
Published 16 ಮಾರ್ಚ್ 2024, 16:11 IST
Last Updated 16 ಮಾರ್ಚ್ 2024, 16:11 IST
ಅಕ್ಷರ ಗಾತ್ರ

ರಾಯಚೂರು: ‘ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.

ಏ.12ರಂದು ಅಧಿಸೂಚನೆ ಹೊರಡಿಸಲಾಗುವುದು. ಏ.19 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ. 20ರಂದು ನಾಮಪತ್ರಗಳ ಪರಿಶೀಲನೆ ಹಾಗೂ 22ರಂದು ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಹಿತಿ ನೀಡಿದರು.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಯಾದಗಿರಿ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 2203 ಮತಗಟ್ಟೆಗಳು ಇವೆ. ಇವುಗಳಲ್ಲಿ 423 ಸೂಕ್ಷ್ಮ ಹಾಗೂ 46 ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 9,85,675 ಪುರುಷರು, 10,05246 ಮಹಿಳೆಯರು, 297 ಲೈಂಗಿಕ ಅಲ್ಪಸಂಖ್ಯಾತರು, 85 ವರ್ಷ ಮೇಲ್ಪಟ್ಟ 334 ಮತದಾರರು ಸೇರಿ ಒಟ್ಟು 19,93,755 ಮತದಾರರು ಇದ್ದಾರೆ ಎಂದು ಹೇಳಿದರು.

ಲೋಕಸಭಾ ಕ್ಷೇತ್ರದಲ್ಲಿ 24,086 ಯುವಕರು, 18,299 ಯುವತಿಯರು ಹಾಗೈ 9 ಲೈಂಗಿಕ ಅಲ್ಪಸಂಖ್ಯಾತರು ಸೇರಿ ಒಟ್ಟು 42,394 ಯುವ ಮತದಾರರು, 22,857 ಅಂಗವಿಕಲರು ಮತ ಹಕ್ಕು ಚಲಾಯಿಸಲಿದ್ದಾರೆ. 85 ವರ್ಷ ಮೇಲ್ಪಟ್ಟ 14,746 ಹಿರಿಯ ನಾಗರಿಕರು ಹಾಗೂ 2,2857 ಅಂಗವಿಕಲರು ಅಂಚೆ ಮತದಾನ ಮಾಡಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಗೆ ಬಿಯು 4006, ಸಿಯು 2736, ವಿವಿಪ್ಯಾಟ್ 2869 ಸ್ವೀಕೃತಿಯಾಗಿವೆ. ಪ್ರಥಮ ಹಂತದ ತಪಾಸಣೆ ಕಾರ್ಯವೂ ಪೂರ್ಣಗೊಂಡಿದೆ. 10 ಜನ ಸಹಾಯಕ ಚುನಾವಣಾಧಿಕಾರಿ, 16 ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ಒಟ್ಟು 340 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 5 ಅಂತರ ರಾಜ್ಯ ಹಾಗೂ 9 ಅಂತರ ಜಿಲ್ಲೆ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡಲಾಗಿದೆ. ಚುನಾವಣೆ ಮುಗಿಯುವ ವರೆಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಈಗಾಗಲೇ ಜಿಲ್ಲೆಗೆ ಹೊಂದಿಕೊಂಡಿರುವ ತೆಲಂಗಾಣದ ನಾರಾಯಣಪೇಟೆ, ಗದ್ವಾಲ್ ಹಾಗೂ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ.ತಿಳಿಸಿದರು.

ಅಕ್ರಮ ಮದ್ಯ ಸಾಗಣೆಯ ಮೇಲೆ ನಿಗಾ ಇಡಲಾಗಿದೆ. ಹಣ, ಇನ್ನಿತರ ವಸ್ತುಗಳು ಸಾಗಣೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ತಪಾಸಣೆ ಸಮಯದಲ್ಲಿ ಜಪ್ತಿ ಮಾಡಿದ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ, ಮತದಾರರಿಗೆ ಆಮಿಷ ಒಡ್ಡಲು ನೀಡುವ ಉಡುಗೊರೆ ಇನ್ನಿತರ ಮಾಹಿತಿಯನ್ನು ಇಎಸ್‌ಎಂಎಸ್‌ ಆ್ಯಪ್‌ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.

ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬಂದರೆ ಸಿ–ವಿಜಲ್‌ ಆ್ಯಪ್, ಎನ್‌ಜಿಎಸ್‌ಪಿ ಪೋರ್ಟಲ್‌ ಅಥವಾ ಓಟರ್‌ ಹೆಲ್ಪಲೈನ್‌ ಆ್ಯಪ್‌ ಮೂಲಕ ದೂರು ಕೊಡಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ಮತದಾರರ ಮಾಹಿತಿ

ಪುರುಷ ಮತದಾರರು; 985675

ಮಹಿಳಾ ಮತದಾರರು; 1005246

ಲೈಂಗಿಕ ಅಲ್ಪಸಂಖ್ಯಾತರು; 297

ಒಟ್ಟು ಮತದಾರರು; 1993755

ಒಟ್ಟು ಯುವ ಮತದಾರರು; 42394

ಅಂಗವಿಕಲರು; 22857

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT