ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಖರೀದಿಗೆ ಮದ್ಯಪ್ರಿಯರ ಉದ್ದ ಸಾಲು

ಉರಿಬಿಸಿಲಲ್ಲೂ ಮದ್ಯಕ್ಕಾಗಿ ಸಾಲು, ಬ್ಯಾರಿಕೇಡ್ ಹಾಕಿ ಭದ್ರತೆ, ಪೊಲೀಸರ ನಿಗಾ
Last Updated 5 ಮೇ 2020, 10:22 IST
ಅಕ್ಷರ ಗಾತ್ರ

ಸಿಂಧನೂರು: ಲಾಕ್‍ಡೌನ್‍ನಿಂದ ದುಡಿಮೆ ಇಲ್ಲದೆ ತೀರಾ ಅತಂತ್ರ ಸ್ಥಿತಿಗೆ ಸಿಲುಕಿ ಬದುಕು ಹೈರಾಣಾಗಿದ್ದರೂ ಸಹ ಜನಸಾಮಾನ್ಯರು ಸೋಮವಾರ ಮದ್ಯದಂಗಡಿಗಳಿಗೆ ಮುಗಿಬಿದ್ದು ಮದ್ಯದ ಬಾಟಲಿಗಳನ್ನು ಖರೀದಿಸಿದರು.

ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಮದ್ಯ ಮಾರಾಟ ಆರಂಭವಾಗಿದ್ದು, ಪಾನಪ್ರಿಯರು ಮದ್ಯ ಮಾರಾಟ ಮಳಿಗೆಗಳ ಮುಂದೆ ಉರಿಬಿಸಿಲಿನಲ್ಲೂ ಅರ್ಧ ಕಿಲೋ ಮೀಟರ್ ದೂರದವರೆಗೆ ಸಾಲುಗಟ್ಟಿ ನಿಂತು ಮದ್ಯ ಖರೀದಿಸಿದರು.

ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿರುವ ವಿ.ಆರ್.ಲಿಕ್ಕರ್ಸ್, ಎಂಎಸ್‍ಐಎಲ್ ಮಳಿಗೆ, ವಾಣಿ ವೈನ್ಸ್, ಮಿನಿವಿಧಾನಸೌಧ ಮುಂಭಾಗದ ತುಂಗಾಭದ್ರಾ ವೈನ್ಸ್, ಬಸ್ ನಿಲ್ದಾಣ ರಸ್ತೆಯಲ್ಲಿರುವ ವೈಷ್ಣವಿ ವೈನ್ಸ್, ಸಂತೋಷ ವೈನ್ಸ್, ಹಳೆಬಜಾರ್‌ನಲ್ಲಿರುವ ಶಾಂತಲಾ ವೈನ್ಸ್, ನಗರಸಭೆ ಮುಂಭಾಗದಲ್ಲಿರುವ ಅಂಬಿಕಾ ವೈನ್ಸ್ ಸೇರಿದಂತೆ ತಾಲ್ಲೂಕಿನ ಅಂಬಾಮಠ, ದಢೇಸುಗೂರು, ತುರ್ವಿಹಾಳ, ಜವಳಗೇರಾ, ಬಳಗಾನೂರು, ಹಂಚಿನಾಳ, ಗಾಂಧಿನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಒಟ್ಟು 27 ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮದ್ಯ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು ಪಾನಪ್ರಿಯರು ಬೆಳಗಿನ ಜಾವವೇ ಮಳಿಗೆಗಳ ಮುಂದೆ ಜಮಾಯಿಸಿದ್ದರು.

ಮಾಸ್ಕ್, ಕರವಸ್ತ್ರ, ಟಾವೆಲ್‍ಗಳನ್ನು ಮುಖಕ್ಕೆ ಕಟ್ಟಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹಾಕಿದ್ದ ವೃತ್ತಗಳಲ್ಲಿ ಸರದಿ ಸಾಲಿನಲ್ಲಿ ನಿಂತರ ಮದ್ಯದ ಬಾಟಲಿಗಳನ್ನು ಖರೀದಿಸಿದರು. ಕೆಲ ಮದ್ಯದಂಗಡಿಗಳಲ್ಲಿಜನ ಗುಂಪಾಗಿ ಸೇರಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದು ಲಾಠಿ ಬೀಸಿದರು. ಅಂತರ ನಿಯಮ ಪಾಲಿಸಲು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT