ಆರ್‌ಜಿಎಂ ಶಾಲಾ ಮೈದಾನದಲ್ಲಿ ಉದ್ಘಾಟನೆ, ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ. ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾ ತಂಡಗಳು ಉತ್ಸವಕ್ಕೆ ಮೆರಗು ತರಲಿವೆ. ಅ. 4ರಂದು ಕಲ್ಯಾಣ ದಸರಾ, 5ರಂದು ಸಾಂಸ್ಕೃತಿಕ ದಸರಾ, 6ರಂದು ರೈತ ದಸರಾ, 7ರಂದು ಮಹಿಳಾ ದಸರಾ, 8ರಂದು ನೌಕರ ದಸರಾ, 9ರಂದು ಕ್ರೀಡಾ ದಸರಾ, 10ರಂದು ಕಲಾ ದಸರಾ, 11ರಂದು ಯುವ ದಸರಾ, 12ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಂದು ಸಂಜೆ ಸಿದ್ಧಪರ್ವತ ಅಂಬಾಮಠದ ಅಂಬಾದೇವಿಯ ಮೂರ್ತಿಯನ್ನು ಅಂಬಾರಿ ಮೇಲೆ ಇಟ್ಟು ಮಿನಿವಿಧಾನಸೌದಿಂದ ಆರ್‌ಜಿಎಂ ಶಾಲಾ ಮೈದಾನದವರೆಗೆ ವಿವಿಧ ಕಲಾ ತಂಡಗಳು, ಸ್ತಬ್ದಚಿತ್ರಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುವುದು’ ಎಂದರು.