ಬುಧವಾರ, ಸೆಪ್ಟೆಂಬರ್ 22, 2021
23 °C
ನದಿ ಕಡೆ ಜನ, ಜಾನುವಾರು ತೆರಳದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ: ಮುಂಜಾಗ್ರತಾ ಕ್ರಮ ಪರಿಶೀಲನೆ

ಶಕ್ತಿನಗರ: ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರ್ಜಾಪುರ (ಶಕ್ತಿನಗರ): ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಬಸನಗೌಡ ದದ್ದಲ್ ಅವರು ಶನಿವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ನದಿ ಪಾತ್ರದ ಗ್ರಾಮಗಳಾದ ಕರೇಕಲ್, ಕಾಡ್ಲೂರು, ಗುರ್ಜಾಪುರ, ಅರಷಿಣಿಗಿ, ದೇವಸೂಗೂರು, ಗಂಜಳ್ಳಿ, ಕೊರ್ವಿಹಾಳ, ಕೊರ್ತಕುಂದ, ಡಿ.ರಾಂಪೂರ ಮತ್ತು ಆತ್ಕೂರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಪ್ರಸ್ತುತ ನಾರಾಯಣಪುರ ಜಲಾಶಯದಿಂದ 3.50 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗಿದೆ. ಇದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ. ಸಾರ್ವಜನಿಕರು ಮತ್ತು ಜಾನುವಾರುಗಳು ನದಿ ಕಡೆ ತೆರಳದಂತೆ ಸೂಕ್ತ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹದಿಂದ ಯಾವ ಕುಟುಂಬವೂ ತೊಂದರೆ ಎದುರಿಸಬಾರದು. ಅವಶ್ಯಕತೆ ಇರುವ ಕಡೆ ಪರಿಹಾರ ಕೇಂದ್ರ ತೆರೆದು ಜನರನ್ನು ರಕ್ಷಣೆ ಮಾಡಬೇಕು ಎಂದು ಶಾಸಕ ಬಸನಗೌಡ ದದ್ದಲ್ ಹೇಳಿದರು.

ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ, ಕಾಡ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ.ಸಾಧಿಕ್, ಪಿಡಿಒ ಚನ್ನಮ್ಮ, ಮುಖಂಡರಾದ ಜಿ.ಶ್ರೀನಿವಾಸ, ಶಂಕರ ಪಾಟೀಲ, ಮಲ್ಲಪ್ಪಗೌಡ ಸಾಹುಕಾರ, ವಿಶ್ವನಾಥರೆಡ್ಡಿ ಗುರ್ಜಾಪುರ, ಕಂದಾಯ ನಿರೀಕ್ಷಕ ಭೂಪತಿ, ಗ್ರಾಮ ಲೆಕ್ಕಾಧಿಕಾರಿ ಸುರೇಶ, ವೆಂಕಟೇಶ ಪೋತಗಲ್, ಮಧುಕಾಂತ ಹಾಗೂ ನೋಡಲ್‌ ಅಧಿಕಾರಿ ರಾಜೇಂದ್ರ ಜಲ್ದಾರ್‌ ಇದ್ದರು.

ಕೃಷ್ಣಾ ನದಿಗೆ ಬಾಗಿನ ಅರ್ಪಣೆ
ಶಕ್ತಿನಗರ:
ಆರ್‌ಟಿಪಿಎಸ್‌ ಇಂಟ್ಯಾಕ್‌ ಪಂಪ್‌ಹೌಸ್‌ ಬಳಿ ಶಾಸಕ ಬಸನಗೌಡ ದದ್ದಲ್ ಅವರು ಶನಿವಾರ ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ಅದಕ್ಕೂ ಮೊದಲು ಆರ್‌ಟಿಪಿಎಸ್‌ ಇಂಟ್ಯಾಕ್‌ ಪಂಪ್‌ಹೌಸ್‌ ಆವರಣದಲ್ಲಿರುವ ತಾಯಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮರೆಡ್ಡಿ ಪಾಟೀಲ, ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ವೆಂಕಟಚಲಾಪತಿ, ಮಾನವ ಸಂಪನ್ಮೂಲ ವಿಭಾಗದ ಉಪ ಪ್ರಧಾನ ಪ್ರಬಂಧಕ ರಾಜು, ಅಧಿಕಾರಿಗಳಾದ ಪ್ರೇಮಲತಾ, ರಾಜಶೇಖರ, ಮುನಿಸ್ವಾಮಿ, ಭೀಮಯ್ಯ ನಾಯಕ, ಟಿ.ಸೂಗಪ್ಪ , ಮುಖಂಡರಾದ ಜಿ.ಶ್ರೀನಿವಾಸ, ಶಂಕರಪಾಟೀಲ, ಬಸವರಾಜ ವಕೀಲ ಹಾಗೂ ವಿಶ್ವನಾಥರೆಡ್ಡಿ ಗುರ್ಜಾಪುರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.