ಶಕ್ತಿನಗರ: ತಿರುಪತಿಯಲ್ಲಿ 42ನೇ ಅಖಿಲ ಭಾರತ ವಿದ್ಯುತ್ ಮಂಡಳಿ ಸಹಯೋಗದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ(ಕೆಪಿಸಿಎಲ್)ಮಹಿಳಾ ಉದ್ಯೋಗಿಗಳು ಬಹುಮಾನ ಪಡೆದಿದ್ದಾರೆ.
ಚೆಸ್ ಸ್ಪರ್ಧೆಯಲ್ಲಿ ಮಹಿಳಾ ಉದ್ಯೋಗಿಗಳಾದ ಎನ್.ಆರ್.ಗಾಯಿತ್ರಿ, ವಿದ್ಯಾವಜೆ, ಸವಿತಾ ಮೇಸ್ತ್ರಿ, ವಿದ್ಯಾಪ್ರಕಾಶ ಅವರು ತೃತೀಯ ಬಹುಮಾನ, ಶೆಟಲ್ ಬ್ಯಾಡ್ಮಿಂಟನ್ ಜೋಡಿ ವಿಭಾಗದಲ್ಲಿ ಚಂದ್ರಕಲಾ, ಜಯಶ್ರೀ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಮಹಿಳಾ ಉದ್ಯೋಗಿಗಳ ಸಾಧನೆಗೆ ಆರ್‌ಟಿಪಿಎಸ್, ಕೆಪಿಸಿಎಲ್ ಅಧಿಕಾರಿಗಳು ಮತ್ತು ವಿವಿಧ ನೌಕರರ ಸಂಘದ ಪದಾಧಿಕಾರಿಗಳು ಶುಭ ಹಾರೈಸಿ ಮೆಚ್ಚುಗೆ ವ್ಯಕ್ತಪಡಿಸಿದರು.