ರಾಯಚೂರು: ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರುವ ಪೂರ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ 32 ವರ್ಷಗಳ ಹಿಂದೆ ಭೂಮಿ ಕೊಟ್ಟಿರುವ ರಾಯಚೂರು ತಾಲ್ಲೂಕಿನ ಯರಗೇರಾದ 20 ರೈತರು ಇಂದಿಗೂ ಪರಿಹಾರಕ್ಕೆ ಪರದಾಡುತ್ತಿದ್ದಾರೆ.

ರಾಯಚೂರು ತಾಲ್ಲೂಕಿನ ಯರಗೇರಾದ ಸರ್ವೆ ನಂ. 347ರಲ್ಲಿ ಸ್ನಾತಕೋತ್ತರ ಕೇಂದ್ರ ನಿರ್ಮಾಣಕ್ಕೆ ರಾಜ್ಯ ಸರ್ಕಾರ 20 ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಇಂದಿಗೂ ಪರಿಹಾರ ಹಾಗೂ ಉದ್ಯೋಗ ನೀಡಿಲ್ಲ. ರೈತ ಕುಟುಂಬಗಳು 13 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದರೂ ಸರ್ಕಾರ ಸಂತ್ರಸರಿಗೆ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.

ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರ ರಾಯಚೂರು ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಗುಲಬುರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವೇ ರಾಯಚೂರು ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡಿದೆ.

ಭೂಮಿ ಬದಲಿಗೆ ಪರಿಹಾರ ಕೊಡಿ ಅಥವಾ ಬದಲಿ ಜಮೀನು ಕೊಡಿ ಎಂದು ಸಂತ್ರಸ್ತರು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ರೈತ ಮದ್ದಣ್ಣ ನರಸಪ್ಪ ಅವರು ಮಾಹಿತಿ ಹಕ್ಕು ಅಡಿಯಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು.

2020ರ ಆಗಸ್ಟ್ 8ರಂದು ವಿಶ್ವವಿದ್ಯಾಲಯ ಆರಂಭವಾಗಿದ್ದು, ರೈತರಿಂದ ಯಾವುದೇ ಭೂಮಿ ವಶಪಡಿಸಿಕೊಂಡಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಉತ್ತರಿಸುವ ಮೂಲಕ ರೈತರಿಗೆ ಆಘಾತ ಉಂಟು ಮಾಡಿದ್ದಾರೆ.

‘ರೈತರ ಭೂಮಿ ವಶಪಡಿಸಿಕೊಂಡ ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಮುನಿಯಮ್ಮ ಅವರಿಗೆ ರೈತರು ವಿಶ್ವವಿದ್ಯಾಲಯದಲ್ಲಿ ಚಿಕ್ಕ ನೌಕರಿಯನ್ನಾದರೂ ಕೊಡುವಂತೆ ಮನವಿ ಕೊಟ್ಟಾಗ ಅವರು ಮೌಖಿಕ ಭರವಸೆ ಕೊಟ್ಟಿದ್ದರು’ ಎಂದು ರೈತ ಸುರೇಶ ಹೇಳುತ್ತಾರೆ.

20 ರೈತರಲ್ಲಿ 12 ರೈತರು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಉಳಿದ 8 ಜನ ರೈತರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಯರಗೇರಾದ ಸುರೇಶ ಬಾಬು ಅವರು 2023ರ ನವೆಂಬರ್ 27ರಂದು ಜನತಾ ದರ್ಶನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರಿಗೆ ಮನವಿಪತ್ರ ಸಲ್ಲಿಸಿದ್ದರು. ಮುಖ್ಯಮಂತ್ರಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಕಳಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಆಗಿಲ್ಲ.

ವಿಶ್ವವಿದ್ಯಾಲಯಕ್ಕಾಗಿ ಭೂಮಿ ಕಳೆದುಕೊಂಡವರು ಮೂವತ್ತೆರಡು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಸಂತ್ರಸ್ತ ರೈತರಿಗೆ ಪರಿಹಾರ ಸಿಕ್ಕಿಲ್ಲ
ಸುಧಾಕರ ಬಂತ ರೈತ ಯರಗೇರಾ

ನೇಮಕಾತಿಯಲ್ಲಿ ಸ್ಥಳೀಯರ ಕಡೆಗಣನೆ

2022–2023ನೇ ಸಾಲಿನಲ್ಲಿ 175 ಹುದ್ದೆಗಳ ಪೈಕಿ ಮೊದಲ ಹಂತದಲ್ಲಿ 31 ಹುದ್ದೆಗಳಿಗೆ ಮಂಜೂರಾತಿ ದೊರಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಅಂದಿನ ಕುಲಪತಿ ತಿಳಿಸಿದ್ದರು. ಆದರೆ ನೇಮಕಾತಿಯಲ್ಲಿ ಇಂದಿಗೂ ಭೂಮಿ ಕಳೆದುಕೊಂಡ ರೈತರಿಗೆ ಆದ್ಯತೆ ದೊರಕಿಲ್ಲ. ‘ರಾಯಚೂರು ವಿಶ್ವವಿದ್ಯಾಲಯದ ಯಾವುದೇ ಸಮಿತಿಯಲ್ಲೂ ಸ್ಥಳೀಯರಿಗೆ ಆದ್ಯತೆ ಕೊಟ್ಟಿಲ್ಲ. 135 ಹುದ್ದೆಗಳಲ್ಲಿ ಶೇ 50ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಬೇಕು. ಮೂಲ ಜಮೀನು ಮಾಲೀಕರು ಹಾಗೂ ಅವರ ಮಕ್ಕಳನ್ನು ನೇಮಕ ಮಾಡಿಕೊಳ್ಳಬೇಕು’ ಎಂದು ಯರಗೇರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.