ಶುಕ್ರವಾರ, ಅಕ್ಟೋಬರ್ 22, 2021
28 °C

ಧಾರಾಕಾರ ಮಳೆ: ರಾತ್ರಿಯಿಂದ ವಿದ್ಯುತ್ ಕಡಿತ, ಕತ್ತಲೆಯಲ್ಲಿ ರಾಯಚೂರು ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಭಾರಿ ಮಳೆ‌ಯಿಂದಾಗಿ ರಾಯಚೂರು ನಗರದಾದ್ಯಂತ ಶುಕ್ರವಾರ ರಾತ್ರಿಯಿಂದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಶನಿವಾರ ಮಧ್ಯಾಹ್ನ ಕಳೆದರೂ ಯಥಾಸ್ಥಿತಿ ಮುಂದುವರಿದಿದೆ.

ವಿದ್ಯುತ್ ಅವಲಂಬಿತ ಕೈಗಾರಿಕೆಗಳು, ಹಿಟ್ಟಿನ ಗಿರಣಿ, ಝರಾಕ್ಸ್ ಮಳಿಗೆಗಳು, ಡಿಟಿಪಿ ಕೇಂದ್ರಗಳು ಸೇರಿದಂತೆ ಹಲವು ಕಡೆಗಳಲ್ಲಿ ಶನಿವಾರ ಎಂದಿನಂತೆ ಕೆಲಸ ಆರಂಭವಾಗಿಲ್ಲ.

ನಗರದ ಕೆಇಬಿ ಕಾಲೋನಿಯಲ್ಲಿರುವ 220 ಕೆವಿ ಫೀಡರ್ ಸುಸ್ಥಿತಿಯಲ್ಲಿದ್ದರೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. 

'ಭಾರಿ ಮಳೆಯಿಂದಾಗಿ ರಾಯಚೂರಿನಲ್ಲಿ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳಲ್ಲಿ ಸಮಸ್ಯೆ ಆಗಿದೆ. ಈ ಕಾರಣದಿಂದ ವಿದ್ಯುತ್ ಸ್ಥಗಿತ ಮಾಡಲಾಗಿದೆ. ಎಲ್ಲ ಕಡೆಗೂ ಪರಿಶೀಲನೆ ಮಾಡಿದ ಬಳಿಕವೇ ಮತ್ತೆ ವಿದ್ಯುತ್ ಸಂಪರ್ಕ ಕೊಡಲಾಗುತ್ತದೆ' ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು