ರಾಯಚೂರು: ಇಲ್ಲಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆದಾಖಲಾಗಿದ್ದ ರೋಗಿಯೊಬ್ಬರು 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಜರುಗಿದೆ.

ರಾಯಚೂರಿನ ಎಲ್ಬಿಎಸ್ ನಗರದ ನಿವಾಸಿ ತಾಹೀರ್ ಅಹ್ಮದ್(42) ಮೃತ ವ್ಯಕ್ತಿ. ಮದ್ಯವ್ಯಸನಿಯಾಗಿದ್ದ ತಾಹೇರ್ ಎರಡು ಬಾರಿ ವಿವಾಹವಾಗಿ ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ.

ಹೊಟ್ಟೆನೋವಿನಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ತಾಹೇರ್ ಮಾನಸಿಕ ಖಿನ್ನತೆಗೊಳಲಾಗಿದ್ದ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಭಾಸ್ಕರ್ ಈ ಕುರಿತು ಪ್ರತಿಕ್ರಿಯೆ ನೀಡಿ, ‘ಮಾರ್ಚ್ 30ರಂದು ಆಸ್ಪತ್ರೆಗೆ ಹೊಟ್ಟೆನೋವಿಗಾಗಿ ದಾಖಲಾಗಿದ್ದ ರೋಗಿಯು ಚಿಕಿತ್ಸೆ ಪಡೆಯುತ್ತಿದ್ದ. ಇದ್ದಕ್ಕಿದ್ದಂತೆ ಹಾಸಿಗೆಯಲ್ಲಿ ಕಾಣೆಯಾಗಿದ್ದ ರೋಗಿಯನ್ನು ಸಿಬ್ಬಂದಿ ಹುಡುಕಾಡಿದಾಗ ಶವ ಪತ್ತೆಯಾಗಿದೆ. ಸಿಬ್ಬಂದಿ ವಿಚಾರಣೆ ನಡೆಸಿ, ಮೃತದೇಹವನ್ನು ಶವಾಗಾರಕ್ಕೆ ಪರೀಕ್ಷೆಗೆ ಕಳಿಸಲಾಗಿದೆ‘ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.