ಭಾನುವಾರ, ಜನವರಿ 16, 2022
28 °C

ಬೆಳೆ ಹಾನಿ ಪರಿಹಾರ ಶೀಘ್ರ ವಿತರಿಸಿ: ಶಾಸಕ ರಾಜಾವೆಂಕಟಪ್ಪ ನಾಯಕ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿರವಾರ: ‘ಅಕಾಲಿಕ ಮಳೆಗೆ ತುತ್ತಾಗಿರುವ ಭತ್ತದ ಬೆಳೆ ಪರಿಹಾರದ ಹಣವನ್ನು ಸರ್ಕಾರವು ಅಗತ್ಯ ಮಾಹಿತಿ ಪಡೆದು ಕಟಾವು ಕಾರ್ಯ ಮುಗಿಯುವುದರೊಳಗೆ ರೈತರಿಗೆ ನೀಡಿ ಸಂಕಷ್ಟ ಪರಿಹರಿಸಬೇಕು' ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.

ತಾಲ್ಲೂಕಿನ ಚಾಗಭಾವಿ ಕ್ಯಾಂಪ್ ವ್ಯಾಪ್ತಿಯಲ್ಲಿ ಭತ್ತಬೆಳೆದ ಹೊಲಗಳಿಗೆ ಶನಿವಾರ ಭೇಟಿ ನೀಡಿ ಬೆಳೆ ವೀಕ್ಷಿಸಿ ಮಾತನಾಡಿದ ಅವರು, ಕಟಾವಿಗೆ ಬಂದಿದ್ದ ಭತ್ತವು ಅಕಾಲಿಕ ಮಳೆಯಿಂದ ಸಂಪೂರ್ಣ ನೆಲಕಚ್ಚಿದೆ. ಸಾಲ ಮಾಡಿದ ಬೆಳೆದ ಭತ್ತವು ರೈತನಿಗೆ ಸಂಕಷ್ಟ ತಂದೊಡ್ಡಿದ್ದು, ಅಧಿಕಾರಿಗಳು ಕೂಡಲೇ ಸಮರ್ಪಕ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಿದರು.

ಸಿರವಾರ ತಾಲ್ಲೂಕಿನಲ್ಲಿ 2258 ಎಕರೆ ಪ್ರದೇಶದಲ್ಲಿ ಭತ್ತ ಬೆಳೆ ಹಾನಿಯಾಗಿದ್ದು, ಪ್ರತಿ ಎಕರೆ ₹35 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹತ್ತಿ, ತೊಗರಿ ಹಾಗೂ ಮೆಣಸಿನಕಾಯಿ ಬೆಳೆ ಕೂಡ ಹಾನಿಯಾಗಿದ್ದು ಹತ್ತಿ ₹ 25 ಸಾವಿರ, ತೊಗರಿ ಬೆಳೆಗೆ ₹ 15 ಸಾವಿರ, ಮೆಣಸಿನಕಾಯಿ ಬೆಳೆಗೆ ₹ 10 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿದರು.

ರಾಜ್ಯ ಸರ್ಕಾರ ಗುರುವಾರ ಘೋಷಣೆ ಮಾಡಿದ ಪರಿಹಾರದಲ್ಲಿ ರಾಯಚೂರು ಜಿಲ್ಲೆಯ ಕಡೆಗಣಿಸಿದ್ದು, ಇಲ್ಲಿನ ರೈತರು ರೈತರಲ್ಲವೇ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ, ಕಂದಾಯ ನಿರೀಕ್ಷಕ ಶ್ರೀನಾಥ, ಕೃಷಿ ಅಧಿಕಾರ ಅಯ್ಯನಗೌಡ ಐರೆಡ್ಡಿ, ಮುಖಂಡರಾದ ರಾಜಾ ರಾಮಚಂದ್ರ ನಾಯಕ, ನಾಗರಾಜ ಬೋಗಾವತಿ, ಅಳ್ಳಪ್ಪ ನಾಯಕ, ಎಸ್.ಯಂಕೋಬ, ಗೋಪಾಲ ನಾಯಕ ಹರವಿ, ಅಮರೇಶ ನಾಯಕ ಆಲ್ದಾಳ, ರವಿ ಪಾಟೀಲ ಭ್ಯಾಗವಾಟ , ಮೌಲ ಸಾಬ್, ಶಿವರಾಜ ನಾಯಕ ಚಾಗಭಾವಿ, ಎಂ.ಡಿ.ಇಸ್ಮಾಯಿಲ್, ಬಸವಂತರಾಯ ಪಾಟೀಲ್, ಹನುಮಂತರಾಯ ನಾಯಕ, ಸೂಗರಯ್ಯ ಸ್ವಾಮಿ ಗಣದಿನ್ನಿ, ಯಮನಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು