ಮಂತ್ರಾಲಯ (ರಾಯಚೂರು): ಮಂತ್ರಾಲಯದಲ್ಲಿ ಗುರು ಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಗುರುವಾರ ಉತ್ತರಾರಾಧನೆ ವಿಜೃಂಭಣೆಯಿಂದ ನಡೆಯಿತು.
ಶ್ರೀರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯನ್ನು ಶ್ರೀ ಮಠದ ಆವರಣದಿಂದ ಕಲಾ ತಂಡಗಳ ಮೆರವಣಿಗೆ ಮೂಲಕ ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಆವರಣಕ್ಕೆ ಸಂಭ್ರಮ ಸಡಗರಗಳೊಂದಿಗೆ ತರಲಾಯಿತು.
ವಿದ್ಯಾಪೀಠದ ವಿದ್ಯಾರ್ಥಿಗಳು ರಾಘವೇಂದ್ರ ಅಷ್ಟೋತ್ತರ ಪಠಿಸಿದ ನಂತರ ಶ್ರೀ ಮಠಕ್ಕೆ ಕರೆತಂದು ಮೂಲ ಬೃಂದಾವನ ಪೂಜೆ ಸಲ್ಲಿಸಲಾಯಿತು. ನಂತರ ವಸಂತೋತ್ಸವ ಹಾಗೂ ಮಹಾರಥೋತ್ಸವ ಜರುಗಿತು.