ರಾಯಚೂರು: ನಗರದ ಹೊರವಲಯದ ಶ್ರೀರಾಮನಗರ ಬಡಾವಣೆಗೆ ನುಗ್ಗಿದ ನರಿಯೊಂದು ಒಬ್ಬ ಬಾಲಕಿ ಸೇರಿ ನಾಲ್ವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಅರಣ್ಯ ಪ್ರದೇಶದಿಂದ ಆಹಾರ ಹುಡುಕುತ್ತ ನಗರಕ್ಕೆ ಬಂದ ನರಿ ಶ್ರೀರಾಮನಗರದಲ್ಲಿ ಸೋಮವಾರ ಬಾಲಕಿ, ಮಹಿಳೆ ಹಾಗೂ ಇಬ್ಬರು ವೃದ್ದರಿಗೆ ಕಚ್ಚಿ ಗಾಯಗೊಳಿಸಿದೆ.

ಗಾಯಗೊಂಡ ಪೂಜಾ, ಅಕ್ಕನಾಗಮ್ಮ, ರಂಗಣ್ಣ ಹಾಗೂ ಮಂಜುನಾಥ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀರಾಮನಗರ ಬಡಾವಣೆಯ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಆರ್.ಎಫ್.ಒ. ರಾಜೇಶ ನಾಯಕ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಸ್ಥಳೀಯರ ನೆರವಿನೊಂದಿಗೆ ಬಲೆ ಬೀಸಿ ನರಿಯನ್ನು ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.