ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಠಿಣ ಪರಿಶ್ರಮದ ಸಾರ್ಥಕ ಸೇವೆಯ ವಿತರಕರು

Published : 4 ಸೆಪ್ಟೆಂಬರ್ 2025, 7:14 IST
Last Updated : 4 ಸೆಪ್ಟೆಂಬರ್ 2025, 7:14 IST
ಫಾಲೋ ಮಾಡಿ
Comments
20 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿದ್ದೇನೆ. ಜಗತ್ತಿನ ಆಗುಹೋಗುಗಳ ಸುದ್ದಿಹೊತ್ತು ಮನೆಮನೆಗಳಿಗೆ ತಲುಪಿಸಿ ಓದುಗರಿಗೆ ಪತ್ರಿಕೆ ವಿತರಿಸಿಯೇ ಬದುಕು ಕಟ್ಟಿಕೊಂಡಿದ್ದೇನೆ. ಸರ್ಕಾರ ನಮ್ಮನ್ನು ಗುರುತಿಸಿಲ್ಲ ಎನ್ನುವ ಬೇಸರವಿದೆ
ವೆಂಕಟೇಶ ಮಾಡಗೇರಿ ಪತ್ರಿಕಾ ವಿತರಕ
ಕಳೆದ 10 ವರ್ಷಗಳಿಂದ ಪತ್ರಿಕೆ ವಿತರಕನಾಗಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ ಓದುಗರಿಗೆ ಸರಿಯಾಗಿ ಪತ್ರಿಕೆಗಳನ್ನು ತಲುಪಿಸುವ ಬದ್ಧತೆಯಲ್ಲಿ ಅನೇಕ ಸವಾಲುಗಳನ್ನು ನಿಭಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ
ಚಂದ್ರೇಗೌಡ ಹೊನ್ನಹಳ್ಳಿ ಲಿಂಗಸುಗೂರು
1996ರಿಂದ ಕಾಲೇಜಿಗೆ ಹೋಗುತ್ತಿದ್ದ ದಿನಗಳಿಂದಲೇ ‘ಪ್ರಜಾವಾಣಿ’ ಪತ್ರಿಕೆ ವಿತರಿಸುತ್ತಿರುವೆ. ಪತ್ರಿಕೆ ಹಂಚುವ ಹುಡುಗರು ಕೈಕೊಡುವ ಕಾರಣ ಒಂದೊಮ್ಮೆ ಸಮಸ್ಯೆ ಆಗುತ್ತದೆ. ಓದಗರಿಗೆ ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡುವುದನ್ನು ಮಾತ್ರ ನಿಲ್ಲಿಸಿಲ್ಲ
ದತ್ತಾತ್ರೇಯ ರಾಯಚೂರು
ಅನೇಕ ವರ್ಷಗಳಿಂದ ವೃತ್ತಿಯಲ್ಲಿರುವ ಪತ್ರಿಕೆ ವಿತರಕರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಬಸ್ ಪಾಸ್ ನಿವೇಶನಗಳನ್ನು ಕೊಡಬೇಕು. 72 ವಯಸ್ಸಿನ ನಮ್ಮಂಥವರ ನೆರವಿಗೆ ಬರಬೇಕು. ನಿವೃತ್ತಿ ವೇತನ ಕೊಡಬೇಕು
ಕೊಟ್ರಯ್ಯಸ್ವಾಮಿ ಸಿಂಧನೂರು
ಸರ್ಕಾರ ಪತ್ರಿಕೆ ವಿತರಕರಿಗೆ ಅಗತ್ಯವಿರುವ ಆರೋಗ್ಯ ವಿಮೆ ಕ್ಷೇಮ ನಿಧಿ ಸ್ಥಾಪಿಸುವ ಜೊತೆಗೆ ಅವುಗಳಿಗೆ ಸರಳ ನಿಮಯಮಗಳನ್ನು ರೂಪಿಸಿ ವಿತರಕರ ಹಿತ ಕಾಯುವ ಅವಶ್ಯಕತೆ ಇದೆ
ಬಸವರಾಜ ಪೂಜಾರಿ ಸಿರವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT