ಸಿರವಾರ: ಪಟ್ಟಣ ಪಂಚಾಯಿತಿಯ 12ನೇ ವಾರ್ಡ್ ಸದಸ್ಯೆ ಅಮರಮ್ಮ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಭಾನುವಾರ ಉಪಚುನಾವಣೆ ನಡೆಯಿತು. ಶೇ69.69ರಷ್ಟು ಮತದಾನವಾಗಿದೆ.

ನೀರಾವರಿ ಇಲಾಖೆಯ ಕಚೇರಿಯ ಮತದಾನ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನ ನಡೆಯಿತು.

ಒಟ್ಟು 759 ಮತದಾರರಲ್ಲಿ 749ರಲ್ಲಿ 521 ಜನ ಮತದಾನ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಜ್ಯೋತಿ ದಾನನಗೌಡ, ಬಿಜೆಪಿಯಿಂದ ಹುಸೇನಬೀ, ಜೆಡಿಎಸ್ನಿಂದ ಮಾಳಮ್ಮ ಹನುಮಂತ ಸ್ಪರ್ಧಿಸಿದ್ದರು.

ತಹಶೀಲ್ದಾರ್ ಅಶೋಕ ಪವಾರ್ ನೇತೃತ್ವದಲ್ಲಿ ಚುನಾವಣಾಧಿಕಾರಿಗಳಾಗಿ ದೇವೆಂದ್ರಪ್ಪ, ಶ್ರೀನಿವಾಸ ಬೂತ್ ಅಧಿಕಾರಿಗಳಾಗಿ ಚನ್ನವೀರಯ್ಯಸ್ವಾಮಿ, ಬಲವಂತ ಮಹೇಂದ್ರಕರ್, ಬಸವರಾಜ, ಅಕ್ಷಯ ಕುಮಾರ ಕಾರ್ಯನಿರ್ವಹಿಸಿದರು.

ಸಿಪಿಐ ಎಂ.ಶಶಿಕಾಂತ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.