ಮುದಗಲ್: ಪಟ್ಟಣದ ದೇವರಾಜ ಅರಸು ಮೆಟ್ರಿಕ್ ಪೂರ್ವ ವಸತಿ ನಿಯಲಕ್ಕೆ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ವಿದ್ಯಾರ್ಥಿಗಳು ಪುರಸಭೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ವಸತಿ ನಿಲಯಕ್ಕೆ ಮೂರು ದಿನಗಳಿಂದ ನೀರು ಬಂದಿಲ್ಲ. ಮುಖ ತೊಳೆಯಲು, ಕುಡಿಯಲು, ಸ್ನಾನ, ಶೌಚಕ್ಕೆ ನೀರು ಇಲ್ಲದೆ ಪರದಾಡುತ್ತಿದ್ದೇವೆ. ಊಟ ಮಾಡಿ ಪೇಪರ್‌ನಿಂದ ಕೈ ಒರೆಸಿಕೊಳ್ಳುತ್ತಿದ್ದೇವೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯವಹಿಸಿದ್ದಾರೆ. ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಹೆಚ್ಚಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಫಾಗಿಂಗ್ ಮಾಡಿಲ್ಲ. ನಮಗೆ ರೋಗ ಬರುವ ಆತರಂಕ ಕಾಡುತ್ತಿದೆ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಿಸಬೇಕೆಂದು ಒತ್ತಾಯಿಸಿದರು.
ಪುರಸಭೆಯಲ್ಲಿ ಅಧಿಕಾರಿಗಳು ಯಾರು ಇಲ್ಲದರಿಂದ ಶಾಲೆಗೆ ಹೋಗಲು ಸಮಯವಾಗುತ್ತಿದೆ ಎಂದು ಪ್ರತಿಭಟನೆ ನಿಲ್ಲಿಸಿ ಶಾಲೆಗೆ ಹೋದರು.