ಲಿಂಗಸುಗೂರು: ತಾಲ್ಲೂಕಿನ ಗುಂತಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದನಾಳರ ದೊಡ್ಡಿಗೆ ದಾರಿಯೇ ದುರ್ಗಮವಾಗಿದೆ

ಗುಂತಗೋಳ ಗ್ರಾಮದಿಂದ 6 ಕಿಮೀ ದೂರದಲ್ಲಿರುವ ಐದನಾಳರ ದೊಡ್ಡಿಯಲ್ಲಿ 80ಕ್ಕೂ ಅಧಿಕ ಮಂದಿ ವಾಸ ಮಾಡುತ್ತಿದ್ದಾರೆ. ದೊಡ್ಡಿಗೆ ರಸ್ತೆಯೂ ಇಲ್ಲ. ಬಸ್ ಸೌಕರ್ಯವೂ ಇಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಮನೆಗೆ ಏನೇ ಬೇಕಿದ್ದರೂ 6 ಕಿ.ಮೀ ನಡೆದುಕೊಂಡೇ ಗುಂತಗೋಳ ಗ್ರಾಮಕ್ಕೆ ಹೋಗಬೇಕಿದೆ. ಗುಂತಗೋಳ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯೆ ಹಳ್ಳ ಹರಿಯುತ್ತಿದ್ದು ಅದು ಕೂಡಾ ಮಳೆಯಾಗುತ್ತಿದ್ದರಿಂದ ಭರ್ತಿಯಾಗಿ ಹರಿಯುತ್ತಿದೆ.

ದೊಡ್ಡಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುಂತಗೋಳ ಶಾಲೆಗೆ ಇದೇ ಹಳ್ಳದ ಮುಖಾಂತರವೇ ಹೋಗಿ ಬರಬೇಕಾಗಿದೆ. ದೊಡ್ಡಿಗೆ ಅಗತ್ಯ ಸೌಲಭ್ಯ ಒದಗಿಸುವಂತೆ ಸಾಕಷ್ಟು ಭಾರಿ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದರೂ ಮನವಿಗೆ ಸ್ಪಂದಿಸಿಲ್ಲ. ತೊಂದರೆಯಲ್ಲಿಯೇ ಜೀವನ ನಡೆಸುತ್ತಿದ್ದೇವೆ ಎಂದು ದೊಡ್ಡಿಯ ನಿವಾಸಿ ಬೀರಪ್ಪ ಕುರುಬರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.