ಬುಧವಾರ, ಮೇ 18, 2022
27 °C

ರಾಯಚೂರು: ಸಾವಯವ ಕೃಷಿ ಮತ್ತು ಮಹತ್ವದ ಕುರಿತು ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಶ್ರಧ್ದೆ ಮತ್ತು ಶ್ರಮವನ್ನು ರೈತರು ಅಳವಡಿಸಿಕೊಂಡಾಗ ಮಾತ್ರವೇ ಸಾವಯವ ಕೃಷಿಯಲ್ಲಿ ಸುಸ್ಥಿರ ಇಳುವರಿಯನ್ನು ಪಡೆಯಲು ಸಾಧ್ಯ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಸಾವಯವ ಕೃಷಿ ಸಂಶೋಧನಾ ಸಂಸ್ಥೆಯಿಂದ ಕಲ್ಯಾಣ ಕರ್ನಾಟಕ ಭಾಗದ ಸಾವಯವ ಕೃಷಿಯಲ್ಲಿ ಆಸಕ್ತಿ ಇರುವ ರೈತರಿಗಾಗಿ ಸೋಮವಾರ ಏರ್ಪಡಿಸಿದ್ದ “ಸಾವಯವ ಕೃಷಿ ಮತ್ತು ಮಹತ್ವ” ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾವಯವ ಕೃಷಿಯು ಒಂದು ಜೀವಂತ ಕೃಷಿಯಾಗಿದ್ದು, ಇಂದಿನ ಸ್ಥಿತಿಗೆ ಬಹಳ ಬೇಕಾದುದ್ದಾಗಿದೆ. ರೈತರು ವೈಜ್ಞಾನಿಕವಾಗಿ ಸಮಗ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಂಗಾಮು ಪ್ರಾರಂಭಕ್ಕಿಂತ ಮುಂಚಿತವಾಗಿ ರೈತರು ವಿಶ್ವವಿದ್ಯಾಲಯಕ್ಕೆ ತಮಗೆ ಬೇಕಾಗಿರುವ ಸಾವಯವ ಗೊಬ್ಬರ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ಬೇಡಿಕೆಯನ್ನು ಸಲ್ಲಿಸಿದರೆ ಕೃಷಿ ವಿಶ್ವವಿದ್ಯಾಲಯಿಂದ ಅವುಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಕೃಷಿ ಮಹಾವಿದ್ಯಾಲದ ಡೀನ ಡಾ.ಎಂ.ಭೀಮಣ್ಣ ಮಾತನಾಡಿ, ಸಾವಯವ ಕೃಷಿಯ ಅನುಕರಣೆಯಿಂದ ರೈತನು ಸ್ವಾವಲಂಬಿ ಹಾಗೂ ಸ್ವಾಭಿಮಾನಿ ಆಗಿ ಸುಸ್ಥಿರವಾದ ಇಳುವರಿಯನ್ನು ಪಡೆಯಲು ಬೆಳೆಗಳ ಆಯ್ಕೆ ಅತ್ಯಅವಶ್ಯಕ. ಉಪಯೋಗಿಸುವ ಆಹಾರ ಧಾನ್ಯಗಳಲ್ಲಿ ಕಲಬೆರಿಕೆ ಆಗದಂತೆ ಸೂಕ್ತಕ್ರಮ ವಹಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಜೈವಿಕ ನಿಯಂತ್ರಣ ವಿಭಾಗದ ಮುಖ್ಯಸ್ಥ ಡಾ.ಆರುಣಕುಮಾರ ಹೊಸಮನಿ ಮಾತನಾಡಿ, ಕೀಟ ನಿಯಂತ್ರಣದಲ್ಲಿ ಜೈವಿಕ ಪರಿಕರಗಳ ಪ್ರಾಮುಖ್ಯತೆಯನ್ನು ತಿಳಿಸಿದರು.

ಸಾವಯವ ಕೃಷಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಗುರುರಾಜ ಸುಂಕದ ಅಧ್ಯಕ್ಷತೆ ವಹಿಸಿ, ಸಾವಯವ ಕೃಷಿಯ ಮಹತ್ವದ ಬಗ್ಗೆ ತಿಳಿಸಿದರು. ಮಣ್ಣು ವಿಜ್ಞಾನಿ ಡಾ.ಎಸ್.ಎನ್. ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ಆನಂದ ಕಾಂಬಳೆ ವಂದಿಸಿದರು. ತರಬೇತಿಯಲ್ಲಿ 40 ರೈತರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು