ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಲು ಒತ್ತಾಯ

Last Updated 15 ಜನವರಿ 2021, 13:25 IST
ಅಕ್ಷರ ಗಾತ್ರ

ರಾಯಚೂರು: ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರನ್ನು ಮರು ನೇಮಕ ಮಾಡಕೊಳ್ಳಬೇಕು ವೇತನ ಹಾಗೂ ಇತರೆ ಮೂಲಸೌಕರ್ಯ ನೀಡದ ಕಂಪನಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಾರ್ಕ್ ವೀ ಗುತ್ತಿಗೆ ಕಾರ್ಮಿಕರ ಸಂಘ (ಎಐಯುಟಿಯುಸಿ ಸಂಯೋಜಿತ)ದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಆನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಚಿಕ್ಕಸುಗೂರು ಬಳಿಯ ಕೆಐಎಡಿಬಿ ಇಂಡಸ್ಟ್ರೀಯಲ್ ಏರಿಯಾದಲ್ಲಿನ ಸ್ಪಾರ್ಕ್ ವೀ ಕೆಮಿಕಲ್ಸ್ ಪ್ರೈ.ಲಿ ಫ್ಲಾಂಟ್ ನಲ್ಲಿ ಕೆಲಸ ಮಾಡುವ ಪ್ರತಿಭಾ ಎಂಟರ್‌ಪ್ರೈಸಸ್‌ ಅಡಿಯಲ್ಲಿ 50 ಕಾರ್ಮಿಕರನ್ನು ಜನವರಿ 5ರಂದು ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಆಡಳಿತ ಮಂಡಳಿಯು ಹಾಗೂ ನಿರ್ದೇಶಕರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ.

ಕಾರ್ಮಿಕರ ಮೇಲಿನ ದೂರುಗಳನ್ನು ವಿಚಾರಿಸದೇ ವೇತನ ಕಡಿತ, ಪಿಎಫ್,ಇಎಸ್ಐ ಹಾಗೂ ರಜೆ ಮತ್ತಿತರ ಸೌಕರ್ಯ ನಿರಾಕರಿಸಿ, ಅವುಗಳ ಸಮಗ್ರ ಪರಿಶೀಲನೆ, ವಿಚಾರಣೆ ನಡೆಸದೇ ಏಕಾಏಕಿ ತೆಗೆದಿದ್ದು ಖಂಡನೀಯ. ಕಾರ್ಮಿಕ ಹಕ್ಕು ಸ್ಥಾಪನೆಗಾಗಿ ಸಂಘಟನೆ ಮಾಡಿಕೊಳ್ಳಲು ಸಹಿಸದೆ ಪ್ರತಿಯಾಗಿ ಕಾರ್ಮಿಕರ ಮೇಲೆ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಕಾರ್ಮಿಕರಿಗೆ ಕುಡಿಯುವ ನೀರು, ಶೌಚಾಲಯ, ಗ್ಲೌಸ್, ಶೂ ಮತ್ತಿತರೆ ಸುರಕ್ಷತಾ ಸಾಮಗ್ರಿಗಳನ್ನು ನೀಡಿ ವಜಾಗೊಳಿಸಿದ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ವಿರೇಶ ಎನ್.ಎಸ್, ಗೌರವಾಧ್ಯಕ್ಷ ಯಲ್ಲಪ್ಪ ನಾಮಾಲಿ, ಉಪಾಧ್ಯಕ್ಷ ಮಹೇಶ. ಚೀಕಲಪರ್ವಿ, ಪ್ರಧಾನ ಕಾರ್ಯದರ್ಶಿ ಸಂತೋಷ್, ಉದಯಕುಮಾರ, ಬಡೇಸಾಬ್, ಸುರೇಶ ಸ್ವಾಮಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT