ರಾಯಚೂರು: ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಹತ್ವಾಕಾಂಕ್ಷಿ ಜಿಲ್ಲೆ ಹಾಗೂ ತಾಲ್ಲೂಕುಗಳ ಸಂಪೂರ್ಣತಾ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ 1 ಗಂಟೆ 20 ನಿಮಿಷ ಯಾವುದೇ ಚರ್ಚೆಯಾಗದೇ ಸಚಿವರು ತಾವು ಬೆಳೆದು ಬಂದ ರಾಜಕೀಯ ಏಳು–ಬೀಳು, ತಮ್ಮ ಕಾರ್ಯಸಾಧನೆಗಳ ಬಗ್ಗೆ ಹೇಳಿ ಮುಗಿಸಿದರು.

ಮಧ್ಯಾಹ್ನ 1.30ಕ್ಕೆ ನಿಗದಿಯಾಗಿದ್ದ ಸಭೆಗೆ ಸಚಿವರು ಮಧ್ಯಾಹ್ನ 3.40ಕ್ಕೆ ಆಗಮಿಸಿದರು. ಸಚಿವರಿಗಾಗಿ ಕಾದು ಸುಸ್ತಾದ ವಿವಿಧ ಇಲಾಖೆಯ ಅಧಿಕಾರಿಗಳು ಸಚಿವರು ಬಂದಾಗ ಸಭೆಗೆ ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಹೇಳಲು ತಯಾರಿ ಮಾಡಿಕೊಂಡು ಬಂದಿದ್ದರು. ಆದರೆ ಸಚಿವರು ಯಾವುದೇ ಇಲಾಖೆಯ ಅಧಿಕಾರಿಗಳಿಂದ ಪ್ರಗತಿ ಪರಿಶೀಲನೆ ಮಾಡದೇ ಕೇವಲ ಭಾಷಣದ ರೀತಿಯಲ್ಲಿ ತಮ್ಮ ಸಾಧನೆ ಹಾಗೂ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಹೇಳುತ್ತಾ ಅಧಿಕಾರಿಗಳಿಗೆ ಶಿಸ್ತು, ಬದ್ಧತೆಯ ಪಾಠ ಮಾಡಿದರು.

ನಾನು ಜಿಲ್ಲಾಧಿಕಾರಿಯಾಗಿದ್ದಾಗಿನ ಸ್ಥಿತಿ ಬದಲಾಗಿಲ್ಲ: ಸಭೆಯ ಆರಂಭದಲ್ಲಿ ಸಂಸದ ಜಿ.ಕುಮಾರ ನಾಯಕ ಮಾತನಾಡಿ,‘ರಾಯಚೂರು, ಯಾದಗಿರಿ ಮಹತ್ವಾಕಾಂಕ್ಷಿ ಜಿಲ್ಲೆಗಳಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಯಾದ ರಾಯಚೂರಿನ ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ದೊಡ್ಡ ಮಟ್ಟದ ಯೋಜನೆಗಳ ಅವಶ್ಯವಿದೆ’ ಎಂದರು.

‘ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ಕನ್ವೆರ್ಜೇಶನ್, ಕೊಲಾಬ್ರೇಶನ್ ಆ್ಯಂಡ್ ಕಾಂಪಿಟೇಶನ್ ಅಡಿಯಲ್ಲಿ ಕೇವಲ ಹಿಂದುಳಿದ ಜಿಲ್ಲೆಗಳ ಜೊತೆ ಸ್ಪರ್ಧಿಸಿಕೊಂಡು ಪ್ರಗತಿ ಸಾಧಿಸಲು ಆದ್ಯತೆ ನೀಡಲಾಗಿದೆ. ಆದರೆ ಜಿಲ್ಲೆಯ ಅಭಿವೃದ್ಧಿಗೆ ಇಷ್ಟು ಸಾಲದು. ಹೆಚ್ಚಿನ ಅನುದಾನ, ಬೃಹತ್ ಯೋಜನೆಗಳು ಸಿಗಬೇಕು. ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಜೊತೆ ಸ್ಪರ್ಧೆ ಮಾಡಬೇಕಿದೆ. ಕೇಂದ್ರ ಸಚಿವರು ಇದಕ್ಕೆ ಅಗತ್ಯ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ನಿತಿಶ್ ಕೆ, ಸಚಿವರ ಆಪ್ತ ಕಾರ್ಯದರ್ಶಿ ಅನಿಶ್ ಹೆಗ್ಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿಶೀಲನೆ ಬಿಟ್ಟು ಬೋಧನೆ

ಸಂಸದರ ಮನವಿಗೆ ಪ್ರತಿಕ್ರಿಯಿಸಿ ಮಾತನಾಡಿದ ಸಚಿವ ವಿ.ಸೋಮಣ್ಣ ಅವರು ‘ರಾಯಚೂರು ಜಿಲ್ಲೆಯ ಜೊತೆ 30 ವರ್ಷಗಳ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಬದ್ಧ. ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲ ನೆರವು ನೀಡುವೆ. ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ಪ್ರಧಾನಮಂತ್ರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡುವೆ. ಕೇವಲ ಹೆಚ್ಚಿನ ಅನುದಾನದಿಂದ ಜಿಲ್ಲೆಯ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಅಧಿಕಾರಿಗಳು ಕೀಳರಿಮೆ ಬಿಡಬೇಕು. ಫಲಾನುಭವಿಗಳ ಮನೆ ಬಾಗಿಲಿಗೆ ಸೌಲಭ್ಯ ತಲುಪಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಮಾತನಾಡಿ‘ಮಹತ್ವಾಕಾಂಕ್ಷಿ ಜಿಲ್ಲೆ ತಾಲ್ಲೂಕುಗಳ ಸಂಪೂರ್ಣತಾ ಅಭಿಯಾನದ ಉದ್ದೇಶ ಮೂರು ತಿಂಗಳ ಅವಧಿಯಲ್ಲಿ ಐಸಿಡಿಸಿ ಯೋಜನೆಗಳಡಿ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದು ಶಾಲಾ ಆರಂಭವಾದ ಒಂದು ತಿಂಗಳಲ್ಲಿಯೇ ಪಠ್ಯಪುಸ್ತಕ ಸಮವಸ್ತ್ರ ವಿತರಿಸುವುದು ಇತ್ಯಾದಿ ಯೋಜನೆಗಳು ಸಮರ್ಪಕ ಜಾರಿಗೊಳಿಸುವುದಾಗಿದೆ. ಶೇ 95ರಿಂದ 100ರಷ್ಟು ಪ್ರಗತಿ ಸಾಧಿಸಿದ್ದೇವೆ. ಜುಲೈ ಆಗಸ್ಟ್ ಹಾಗೂ ಸೆಪ್ಟೆಂಬರ್ ಅಂತ್ಯದ ಕಾಲಮಿತಿ ಇದೆ’ ಎಂದರು.

ಶಾಸಕರ ವಿರುದ್ಧ ಗರಂ

ಸಚಿವರು ಮಾತನಾಡುವಾಗ ಮೊಬೈಲ್‌ನಲ್ಲಿ ಮಗ್ನರಾಗಿದ್ದ ಶಾಸಕ ಡಾ.ಶಿವರಾಜ ಪಾಟೀಲರ ಬಗ್ಗೆ ಅಸಮಾಧಾನಗೊಂಡು ‘ನಾನು ಹೋದ ನಂತರ ಮೊಬೈಲ್ ನೋಡು’. ಇಲ್ಲಿ ನಾನು ಏನು ಮಾಡ್ತಾ ಇದ್ದೇನೆ’ ಎಂದು ಗದರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.