ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

Published : 16 ಆಗಸ್ಟ್ 2024, 14:41 IST
Last Updated : 16 ಆಗಸ್ಟ್ 2024, 14:41 IST
ಫಾಲೋ ಮಾಡಿ
Comments

ರಾಯಚೂರು: ವರಮಹಾಲಕ್ಷ್ಮಿ ವ್ರತಾಚರಣೆ ಪ್ರಯುಕ್ತ ಜಿಲ್ಲೆಯಾದ್ಯಂತ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಗೃಹಿಣಿಯರು ಮನೆಗಳಲ್ಲಿ ಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಚಿನ್ನಾಭರಣ ಹಾಗೂ ಹೂವುಗಳಿಂದ ಅಲಂಕರಿಸಿದರು. ಬಗೆ ಬಗೆಯ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿ ದೇವಿಗೆ ನೈವೇದ್ಯ ಮಾಡಿದರು. ಹಣ್ಣು ಕಾಯಿ ಸಮರ್ಪಿಸಿದರು. ನೋಟು ಹಾಗೂ ನಾಣ್ಯಗಳನ್ನು ಇಟ್ಟು ವಿಶೇಷ ಪೂಜೆಗೈದರು.

ನೆರೆಹೊರೆಯ ಹಾಗೂ ಪರಿಚಯಸ್ಥ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ–ಕುಂಕುಮ ಕೊಟ್ಟು ಉಡಿ ತುಂಬಿದರು. ನಂತರ ಪ್ರಾರ್ಥನೆ ಸಲ್ಲಿಸಿ ಸಾಮೂಹಿಕವಾಗಿ ಭೋಜನ ಮಾಡಿದರು.

ನಗರದಲ್ಲಿರುವ ಲಕ್ಷ್ಮಿ ಮಂದಿರ, ದೇವಿ ಮಂದಿರ, ಹನುಮಾನ ಮಂದಿರಗಳಲ್ಲಿ ಮಹಾಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು. ಬಾಳೆದಿಂಡುಗಳನ್ನು ಬಳಸಿ ದೇವಿಯ ಮಂಟಪ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಿದರೆ, ಕೆಲವರು ಚಿಕ್ಕ ಮಂಟಪಗಳಿಗೆ ಬಾಳೆಗಿಡ, ಕಬ್ಬು ಕಟ್ಟಿ ಮಂಟಪ ನಿರ್ಮಿಸಿ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT