ಮಂಗಳವಾರ, ಮೇ 18, 2021
29 °C
ತಗಚಗೆರೆ ಗ್ರಾಮಸ್ಥರಿಂದ ಕಾರ್ಯ

ಚನ್ನಪಟ್ಟಣ: ಕೋತಿಗೆ ತಿಥಿಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ತಗಚಗೆರೆ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಕೋತಿಯೊಂದರ ಮೃತದೇಹಕ್ಕೆ ಗ್ರಾಮಸ್ಥರು ಅಂತ್ಯಸಂಸ್ಕಾರ ನಡೆಸಿ, ಹನ್ನೊಂದು ದಿನಕ್ಕೆ ತಿಥಿ ಕಾರ್ಯ ನೆರವೇರಿಸಿದ್ದಾರೆ.

ಗ್ರಾಮದ ಶಿಕ್ಷಕ ನಾಗರಾಜು ಅವರು ಗ್ರಾಮಸ್ಥರೊಡಗೂಡಿ ಕೋತಿಯ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನಡೆಸಿ, ಶುಕ್ರವಾರ 11 ದಿನದ ತಿಥಿಕಾರ್ಯ ನೆರವೇರಿಸಿ ಕೋತಿಗೆ ಎಡೆ ಇಟ್ಟು ಪೂಜಿಸಿದ್ದಲ್ಲದೆ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಸಿದರು.

ಗ್ರಾಮದ ಮಾಸ್ತಮ್ಮ ತಾಯಿಯ ದೇವಸ್ಥಾನದ ಆವರಣದಲ್ಲಿ ಮೃತ ಕೋತಿಗೆ ಸಮಾಧಿ ನಿರ್ಮಾಣ ಮಾಡಿ, ಜೈ ಭಜರಂಗಿ ಎಂಬ ಕಲ್ಲನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಪುಟ್ಟದಾಗಿ ಗುಡಿ ನಿರ್ಮಾಣ ಮಾಡಲು ಚಿಂತನೆ ನಡೆಸಿದ್ದಾರೆ. ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಮನುಷ್ಯರಾದ ನಾವು ಅವುಗಳಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಬೇಕು. ಅವುಗಳ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಶಿಕ್ಷಕ ನಾಗರಾಜು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು