ಭಾನುವಾರ, ಜುಲೈ 25, 2021
21 °C

ರಾಮನಗರ | 34 ಕೊರೊನಾ ಪ್ರಕರಣ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಭಾನುವಾರ 34 ಮಂದಿಯಲ್ಲಿ ಕೋವಿಡ್ -19 ಸೋಂಕು ದೃಢವಾಗಿದೆ. ಕನಕಪುರದಲ್ಲಿ ವ್ಯಕ್ತಿಯೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಮನಗರ ತಾಲ್ಲೂಕಿನಲ್ಲಿ ಒಂದೇ ದಿನ 20 ಮಂದಿಯಲ್ಲಿ ಸೋಂಕು ಕಂಡುಬಂದಿರುವುದು ಜನರ ಆತಂಕ ಹೆಚ್ಚಿಸಿದೆ. ಚನ್ನಪಟ್ಟಣದಲ್ಲಿ 4, ಕನಕಪುರ 2, ಮಾಗಡಿಯಲ್ಲಿ 8 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 462ಕ್ಕೆ ಏರಿಕೆಯಾಗಿದೆ. ಈ ಪೈಕಿ ಕನಕಪುರ 94, ಮಾಗಡಿ 151, ಚನ್ನಪಟ್ಟಣ 87 ಮತ್ತು ರಾಮನಗರದ 130 ಪ್ರಕರಣಗಳು ಸೇರಿವೆ. 294 ಜನರು ಗುಣಮುಖರಾಗಿದ್ದರೆ, ಇನ್ನೂ 159 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನಕಪುರ ತಾಲ್ಲೂಕಿನ 73 ವರ್ಷದ ವ್ಯಕ್ತಿಯೊಬ್ಬರು ಮೂರು ದಿನದ ಹಿಂದೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಅಸುನೀಗಿದರು. ದೇಗುಲ ಮಠದ ಬಳಿಯ ಸ್ಮಶಾನದಲ್ಲಿ ಕೋವಿಡ್‌-19 ನಿಯಮಾವಳಿಯಂತೆ ಅಂತ್ಯಸಂಸ್ಕಾರ ನಡೆಯಿತು. ಸಂಸದ ಡಿ.ಕೆ. ಸುರೇಶ್‌, ವಿಧಾನ ಪರಿಷತ್‌ ಸದಸ್ಯ ರವಿ ಪಿಪಿಇ ಕಿಟ್‌ ಧರಿಸಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು