ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದು ನಿಮ್ಮ ಗೆಲುವಲ್ಲ, ನೈತಿಕ ಅದಃಪತನ

ನಮ್ಮ ಸದಸ್ಯರ ದಾರಿ ತಪ್ಪಿಸಿ, ಗೆಲುವು ಸಾಧಿಸಿದ ಬಾಲಕೃಷ್ಣ: ಹಿಂದುಳಿದ ವರ್ಗದ ಮಹಿಳೆಗೆ ಅನ್ಯಾಯ- ಎ.ಮಂಜುನಾಥ್ ವಾಗ್ದಾಳಿ
Published : 21 ಸೆಪ್ಟೆಂಬರ್ 2024, 5:56 IST
Last Updated : 21 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಮಾಗಡಿ: ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಮಾಗಡಿ ಪುರಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಹಿಂದುಳಿದ ವರ್ಗದ ಮಹಿಳೆಯನ್ನು ಸೋಲಿಸುವ ಮೂಲಕ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ವಾಗ್ದಾಳಿ ನಡೆಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ಪುರಸಭೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನತೆ ಸ್ಪಷ್ಟ ಬಹುಮತ ನೀಡಿತ್ತು. 12 ಜನ ಸದಸ್ಯರ ಜೊತೆಗೆ ಬಿಜೆಪಿ ಸದಸ್ಯೆ ಹಾಗೂ ಎಂ.ಪಿ. ಮತ ಸೇರಿ ಒಟ್ಟು 14 ಸದಸ್ಯರ ಬಲವನ್ನು ಹೊಂದಿದ್ದೆವು. ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ನಮ್ಮ ಬೆಂಬಲಿತ ಮೂರು ಜನ ಸದಸ್ಯರಿಗೆ ಅಧ್ಯಕ್ಷರ ಅಧಿಕಾರ ಹಂಚಿಕೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಶಾಸಕ ಎಚ್.ಸಿ ಬಾಲಕೃಷ್ಣ ನಮ್ಮ ಪಕ್ಷದ ಸದಸ್ಯರಿಗೆ ಹಣದ ಆಸೆ ತೋರಿಸಿ ಅವರು ತಟಸ್ಥವಾಗಿ ಉಳಿಯುವಂತೆ ಮಾಡಿದರು. ಇದು ನಿಮ್ಮ ಗೆಲುವಲ್ಲ, ನೈತಿಕ ಅದಃಪತನ. ನಮ್ಮ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಹಿಂದುಳಿದ ವರ್ಗದ ಮಹಿಳೆಗೆ ಅಧಿಕಾರವನ್ನು ತಪ್ಪಿಸಿದ ಕೀರ್ತಿಗೆ ನೀವು ಪಾತ್ರರಾಗಿದ್ದೀರಿ ಎಂದು ಲೇವಡಿ ಮಾಡಿದರು.

ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ವಿರುದ್ಧ ಕ್ರಮ: ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಪಕ್ಷಕ್ಕೆ ದ್ರೋಹ ಬಗೆದ ನಮ್ಮ ಪಕ್ಷದ ಸದಸ್ಯರಾದ ರಹಮತ್, ರಾಮು, ಕಾಂತರಾಜು, ಹೇಮಲತಾ ಅವರಿಗೆ ಚುನಾವಣೆ ದಿನದಂದು ವಿಪ್ ಜಾರಿ ಮಾಡಲಾಗಿದೆ. ವಿಪ್ ಉಲ್ಲಂಘನೆ ಮಾಡಿದ ನಾಲ್ಕು ಜನ ಸದಸ್ಯರ ವಿರುದ್ಧ ಶಿಸ್ತು ಕ್ರಮ ಕೈಕೊಳ್ಳಲಾಗುತ್ತದೆ. ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ, ಆರು ವರ್ಷ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಬೇರೆಯವರ ಮಕ್ಕಳಿಗೆ ನೀವೇನು ಮುಂಜಿ ಮಾಡುವುದು?

ಬೇರೆ ಯಾರೊ ಹೆತ್ತು–ಹೊತ್ತು ಸಾಕಿದ ಮಕ್ಕಳನ್ನು ಎತ್ತಿಕೊಂಡು ಬಂದು ಇನ್ಯಾರೊ ತಮ್ಮ ಮಕ್ಕಳೆಂದು ಮುಂಜಿ ಮಾಡಿದಂತೆ. ಜೆಡಿಎಸ್ ಪಕ್ಷದಿಂದ ಬಿ ಫಾರಂ ನೀಡಿ ಮನೆ ಮನೆಗೆ ತೆರಳಿ ಮತ ಕೇಳಿ ಹಣ ಖರ್ಚು ಮಾಡಿ ಗೆಲ್ಲಿಸಿಕೊಂಡು ಬಂದ ನಮ್ಮ ಸದಸ್ಯರನ್ನು ಸೆಳೆದುಕೊಂಡು ನಮ್ಮ ಅಭ್ಯರ್ಥಿಯ ಸೋಲಿಗೆ ಕಾರಣರಾಗಿದ್ದಾರೆ ಎಂದು ಎ. ಮಂಜುನಾಥ್ ಹರಿಹಾಯ್ದರು.

ಕಿಕ್ ಬ್ಯಾಕ್: ಹೇಮಾವತಿ ಕಾಮಗಾರಿಗಾಗಿ ಎಕ್ಸ್‌ಪ್ರೆಸ್ ಕೆನಾಲ್ ಎಂಬ ಹೆಸರಿನಲ್ಲಿ ಸರ್ಕಾರ ₹ 300 ಕೋಟಿ ಕಿಕ್ ಪ್ಯಾಕ್ ಪಡೆದಿದೆ ಎಂದು ಎ.ಮಂಜುನಾಥ್ ನೇರ ಆರೋಪ ಮಾಡಿದರು. ಬಿಜೆಪಿ, ಜೆಡಿಎಸ್ ಪಕ್ಷಗಳು ಎಕ್ಸ್‌ಪ್ರೆಸ್ ಕೆನಾಲ್ ವಿರೋಧ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ಆರೋಪಿಸಿದ್ದೀಹ. ಈಗ ಕಾಂಗ್ರೆಸ್ ಪಕ್ಷವೇ ಆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಜನಗಳ ತೆರಿಗೆ ಹಣದ ಕಾಮಗಾರಿ ಪೋಲಾಗುತ್ತಿದೆ ಎಂದು ಎ.ಮಂಜುನಾಥ ವಾಗ್ದಾಳಿ ಮಾಡಿದರು.

ಪುರಸಭೆಯ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT