ಮಂಗಳವಾರ, ಮೇ 18, 2021
28 °C
ಶೇಷಗಿರಿಹಳ್ಳಿ: ಹೆಚ್ಚುವರಿ ಕಟ್ಟಡಕ್ಕೆ ಭೂಮಿಪೂಜೆ

ಬಮೂಲ್‌ ಯೋಜನೆ ಸದ್ಬಳಕೆಗೆ ಸಲಹೆ: ಬಮೂಲ್ ನಿರ್ದೇಶಕ ಹರೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ‘ಹಾಲು ಒಕ್ಕೂಟದಿಂದ ದೊರೆಯುವ ಯೋಜನೆಗಳನ್ನು ಉತ್ಪಾದಕರು ಸದುಪಯೋಗಪಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕು’ ಎಂದು ಬಮೂಲ್ ನಿರ್ದೇಶಕ ಹರೀಶ್ ಹೇಳಿದರು.

ಶೇಷಗಿರಿಹಳ್ಳಿಯಲ್ಲಿ ಹಾಲು ಉತ್ಪಾದಕರ ಸಂಘದಿಂದ ನಡೆದ ₹ 8 ಲಕ್ಷ ವೆಚ್ಚದ 3,000 ಲೀಟರ್ ಸಾಮರ್ಥ್ಯವುಳ್ಳ ಹಾಲು ಶೇಖರಣಾ ಘಟಕದ ಹೆಚ್ಚುವರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಿಸ್ವಾರ್ಥ ಹಾಗೂ ಪಕ್ಷಾತೀತವಾಗಿ ನಡೆಸಿಕೊಂಡು ಹೋದಾಗ ಸಂಸ್ಥೆಗಳು ಅಭಿವೃದ್ಧಿ ಕಾಣುತ್ತವೆ. ಇದಕ್ಕೆ ಶೇಷಗಿರಿಹಳ್ಳಿ ಹಾಲು ಉತ್ಪಾದಕರ ಸಂಘ ಉತ್ತಮ ಉದಾಹರಣೆ. ಈ ಸಂಘದಲ್ಲಿ ಕೇವಲ 60 ಸದಸ್ಯರು ಇದ್ದರೂ ಹೋಮ್ ಡೆಲಿವರಿ ನಿರ್ವಹಣೆ ಮೂಲಕ ಸದಸ್ಯರು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಿ ಡೇರಿಗೆ ಸರಬರಾಜು ಮಾಡುತ್ತಿದ್ದಾರೆ. ರವಿಶಂಕರ್ ಎಂಬುವರು ಪ್ರತಿದಿನ ಹೆಚ್ಚು ಹಾಲು ಪೂರೈಕೆ ಮಾಡುತ್ತಿರುವುದು ಶ್ಲಾಘನೀಯ ಎಂದು
ಹೇಳಿದರು.

ಸಂಘದ ಅಧ್ಯಕ್ಷ ರಘು ಮಾತನಾಡಿ, ಸಂಘದ ಬೆಳವಣಿಗೆ ಹಾಗೂ ರೈತರ ಅಭಿವೃದ್ಧಿಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ಸಂಘವನ್ನು ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್. ಮಲ್ಲೇಶ್ ಮಾತನಾಡಿ, ಸಂಘವು ಪ್ರತಿದಿನ ಸುಮಾರು 2 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ಸುಸ್ಥಿತಿಯಲ್ಲಿದೆ. ಹೀಗಾಗಿ ಸಂಘಕ್ಕೆ ಮೂರು ಸಾವಿರ ಲೀಟರ್ ಸಾಮರ್ಥ್ಯದ ಶೇಖರಣ ಘಟಕದ ಅಗತ್ಯವಿದೆ. ಈಗ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರು ಒಕ್ಕೂಟದಿಂದ ₹ 2 ಲಕ್ಷ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ₹ 1.50 ಲಕ್ಷ ಅನುದಾನ ನೀಡಲಾಗುತ್ತಿದೆ. ಇದರ ಜೊತೆಗೆ ಸಂಘದಲ್ಲಿ ಉಳಿತಾಯ ಆಗಿರುವ ₹ 4.50 ಲಕ್ಷವನ್ನು ಕಟ್ಟಡ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಸಂಘದ ನಿರ್ದೇಶಕರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು