ಚನ್ನಪಟ್ಟಣ: ನಗರದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕೆಲ ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿದಿದೆ. ಅವುಗಳನ್ನು ಪೂರ್ಣಗೊಳಿಸಿ ಭವನ ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ ಆಗಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಘಟಕದಿಂದ ಶನಿವಾರ ಅಯೋಜಿಸಿದ್ದ ನೌಕರರ ತಾಲ್ಲೂಕು ಸಮ್ಮೇಳನ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭವನದ ಕಾಮಗಾರಿ ಸಂಪೂರ್ಣ ಮಾಡುವ ವಿಚಾರದಲ್ಲಿ ಖುದ್ದು ಮುತುವರ್ಜಿ ವಹಿಸಲಾಗುವುದು. ಈ ಬಗ್ಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಭವನ ಪೂರ್ಣಗೊಂಡರೆ ದಲಿತ ಸಮುದಾಯದ ಕಾರ್ಯಕ್ರಮಗಳಿಗೆ
ಅನುಕೂಲವಾಗಲಿದೆ ಎಂದು
ಹೇಳಿದರು.

ಮೈಸೂರು ಉರಿಲಿಂಗಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಮಾತನಾಡಿ, ಗ್ರಾಮಾಂತರ ಮತ್ತು ನಗರದಲ್ಲಿರುವ ಬಡ ವರ್ಗದ ಮಕ್ಕಳನ್ನು ಗುರುತಿಸಿ ಅವರಗೆ ಬೇಕಾದ ಶೈಕ್ಷಣಿಕ ಸೌಲಭ್ಯ ನೀಡಲು ಸಂಘ ಮುಂದಾಗಬೇಕು ಎಂದರು.

ಪ್ರಧಾನ ಮಂತ್ರಿ ಘೋಷಣ್ ಅಭಿಯಾನ ಸಹಾಯಕ ನಿರ್ದೇಶಕ ಎಸ್.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ನಿವೃತ್ತ ಕಾರ್ಯದರ್ಶಿ ರುದ್ರಯ್ಯ, ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಶಿವಶಂಕರ್, ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್ ಮುಖ್ಯ ಭಾಷಣ ಮಾಡಿದರು. ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಜೆ.ರವೀಂದ್ರ, ವಿವಿಧ ಇಲಾಖೆಗಳ ಉಪ ನಿರ್ದೇಶಕರಾದ ಮರಿಸ್ವಾಮಿ, ಎಸ್.ಸ್ವಾಮಿ, ವಿಜಯ್ ಕುಮಾರ್, ಸಾಯಿ ಆಸ್ಪತ್ರೆ ಡಾ.ಸಂಪಂಗಿರಾಮಯ್ಯ, ತಾ.ಪಂ.ಲೆಕ್ಕ ಪರಿಶೋಧನಾಧಿಕಾರಿ ಜೆ.ಕೋಮಲ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕಿಟ್ಟು ಇತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಾದತ್ ಆಲಿ ಖಾನ್, ಎಇಇ ಎಂ.ಎಲ್.ಶಂಕರಪ್ಪ, ವಿವಿಧ ಕ್ಷೇತ್ರದ ಗಣ್ಯರಾದ ಕಲಾವತಿ, ಧನಲಕ್ಷ್ಮಿ, ವೆಂಕಟೇಶ್, ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ವಿಷಕಂಠಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್.ತಿಮ್ಮರಾಜು ಸ್ವಾಗತಿಸಿದರು. ಶಿಕ್ಷಕ ಸೋಮಶೇಖರ್ ನಿರೂಪಿಸಿದರು. ಗಾಯಕ ಬ್ಯಾಡರಹಳ್ಳಿ ಶಿವಕುಮಾರ್ ತಂಡ ನಾಡಗೀತೆ ಹಾಡಿತು. ಎಸ್ ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.