ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದೂರು | ವೈಯಕ್ತಿಕ ದ್ವೇಷ: ಅಡಿಕೆ ಮರ ಕಡಿದು ಆಕ್ರೋಶ

Published 24 ಜನವರಿ 2024, 10:10 IST
Last Updated 24 ಜನವರಿ 2024, 10:10 IST
ಅಕ್ಷರ ಗಾತ್ರ

ಕುದೂರು (ರಾಮನಗರ): ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಅಡಿಕೆ ಮರಗಳನ್ನು ಕಡಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಮಾಗಡಿ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ನಡೆದಿದೆ. ದ್ವೇಷದ ಕಾರಣಕ್ಕಾಗಿ ಗ್ರಾಮದ ಪ್ರಕಾಶ್ ಎಂಬತಾ, ಗೋವಿಂದರಾಜು ಎಂಬುವರಿಗೆ ಸೇರಿದ ಸುಮಾರು 8 ವರ್ಷದ ಅಡಿಕೆ ಮರಗಳು ನಾಶ ಮಾಡಿದ್ದಾನೆ.

ಗ್ರಾಮದ ಸರ್ವೇ ನಂಬರ್ 33/7ರಲ್ಲಿ ಗೋವಿಂದರಾಜು ಅವರು ಜಮೀನು ಹೊಂದಿದ್ದರು. ಪಕ್ಕದಲ್ಲಿ ಸಿದ್ದಗಂಗಮ್ಮ ಅವರ ಜಮೀನಿತ್ತು. ಭೂಮಿ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿತ್ತು. ಗೋವಿಂದಾಜು ಅವರು ಸರ್ವೇ ಮಾಡಿಸಿದಾಗ 3 ಗುಂಟೆ ಒತ್ತುವರಿಯಾಗಿರುವುದು ಗೊತ್ತಾಗಿತ್ತು.

ಇದೇ ವಿಷಯ ಮಾಗಡಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಜ. 21ರಂದು ಜಮೀನಿಗೆ ಬಂದ ಸಿದ್ದಗಂಗಮ್ಮ ಅವರ ಕುಟುಂಬದ ಪ್ರಕಾಶ್ ಫಸಲು ಬಿಡುವ ಅಡಕೆ ಮರಗಳನ್ನು ಕತ್ತಿಯಿಂದ ಕಡಿದು ಹಾಕಿದ್ದಾನೆ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT