ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಅನುಮತಿ ಪಡೆಯದೆ ಹಂದಿಗುಂದಿ ಬೆಟ್ಟ ಹತ್ತಲು ಯತ್ನ: ಜ್ಯೋತಿರಾಜ್ ವಶಕ್ಕೆ

Published 21 ಮಾರ್ಚ್ 2024, 16:29 IST
Last Updated 21 ಮಾರ್ಚ್ 2024, 16:29 IST
ಅಕ್ಷರ ಗಾತ್ರ

ರಾಮನಗರ: ಅನುಮತಿ ಪಡೆಯದೆ ತಾಲ್ಲೂಕಿನ ಹಂದಿಗುಂದಿ ಬೆಟ್ಟವನ್ನು ಗುರುವಾರ ಏಕಾಂಗಿಯಾಗಿ ಹತ್ತಲು ಯತ್ನಿಸಿದ ಸಾಹಸಿಗ ಜ್ಯೋತಿರಾಜ್ (ಕೋತಿರಾಜ್) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಟ್ಟ ಹತ್ತಲು ಅನುಮತಿ ನೀಡುವಂತೆ ಜ್ಯೋತಿರಾಜ್ ಐದಾರು ದಿನಗಳಿಂದ ಇಲಾಖೆಗೆ ಅನುಮತಿ ಕೋರಿದ್ದರು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಅನುಮತಿ ಸಹ ಪಡೆಯಿರಿ. ಆಮೇಲೆ ನಾವು ಅನುಮತಿ ಕೊಡುತ್ತೇವೆ ಎಂದು ಸೂಚಿಸಿದ್ದೆವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ನಮ್ಮ ಸೂಚನೆ ಲೆಕ್ಕಿಸದೆ ಜ್ಯೋತಿರಾಜ್ ಬೆಳಿಗ್ಗೆ ಬೆಟ್ಟ ಹತ್ತುತ್ತಿರುವುದು ಗಮನಕ್ಕೆ ಬಂತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ವಲ್ಪ ದೂರ ಹತ್ತಿದ್ದ ಅವರನ್ನು ಕೆಳಕ್ಕೆ ಇಳಿಸಿ ವಶಕ್ಕೆ ಪಡೆದರು. ನಂತರ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳಿಸಿದೆವು. ಮೊಬೈಲ್‌ನಲ್ಲಿ ಜ್ಯೋತಿರಾಜ್ ಸೆರೆ ಹಿಡಿದಿದ್ದ ಬೆಟ್ಟ ಹತ್ತುವಾಗ ಸೆರೆ ಹಿಡಿದ ದೃಶ್ಯವನ್ನು ಡಿಲೀಟ್‌ ಮಾಡಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT