ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಬಾಲಕಿ ಅಪಹರಣಕ್ಕೆ ಯತ್ನ

Published 11 ಮಾರ್ಚ್ 2024, 6:05 IST
Last Updated 11 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಮಾಗಡಿ: ನಗರದ ಕೆಂಪೇಗೌಡ ವೃತ್ತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 16 ವರ್ಷದ ಬಾಲಕಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದ ಈಚೆಗೆ ಘಟನೆ ನಡೆದಿದೆ. ಈ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿನಿ ಹಾಲಿನ ಕೇಂದ್ರದಲ್ಲಿ ಬಾಲಕಿ ಹಾಲು ಖರೀದಿಸಿ ಮನೆಗೆ ಹೋಗಲು ಆಟೊಗಾಗಿ ಕಾಯುತ್ತಿದ್ದಳು. ಆಗ ಕಾರಿನಲ್ಲಿ ಬಂದ ವ್ಯಕ್ತಿ, ‘ಬಾ ನಿಮ್ಮ ಮನೆಗೆ ಡ್ರಾಪ್ ಮಾಡುತ್ತೇನೆ’ ಎಂದಿದ್ದಾನೆ. ಅದಕ್ಕೆ ಬಾಲಕಿ, ‘ನಿಮ್ಮ ಪರಿಚಯವಿಲ್ಲ. ನಾ ಬರುವುದಿಲ್ಲ’ ಎಂದು ನಿರಾಕರಿಸಿದ್ದಾಳೆ. ಆಗ ನಿಮ್ಮ ಭಾವ ಮತ್ತು ದೊಡ್ಡಮ್ಮ ಇಬ್ಬರೂ ನನಗೆ ಗೊತ್ತು’ ಎಂದು ಪುಸಲಾಯಿಸಿ ಕಾರಿಗೆ ಹತ್ತಿಸಿಕೊಂಡಿದ್ದಾನೆ.

ಮಾರ್ಗ ಮಧ್ಯೆ, ‘ನಿನಗೆ ಬಟ್ಟೆ, ಚಪ್ಪಲಿ, ಪಾನಿಪುರಿ ಕೊಡಿಸುತ್ತೇನೆ’ ಎಂದು ಹೇಳಿದ ವ್ಯಕ್ತಿ, ರಸ್ತೆ ಬದಿ ಪಾನಿಪುರಿ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾನೆ. ಪಾನಿಪುರಿ ತಿನ್ನಲು ನಿರಾಕರಿಸಿದ ಬಾಲಕಿ ಕಾರಿನಿಂದಿಳಿದು ಹೊರಡಲು ಮುಂದಾದಾಗ, ಕೂಡಲೇ ಆಕೆಯನ್ನು ಒಳಕ್ಕೆ ದೂಡಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

ಗಾಬರಿಗೊಂಡ ಬಾಲಕಿ ನೆರವಿಗೆ ಕೂಗಿಕೊಂಡಾಗ, ಎನ್‌ಇಎಸ್ ವೃತ್ತದ ಬಳಿ ಇದ್ದ ಸಾರ್ವಜನಿಕರು ಕಾರು ಅಡ್ಡಗಟ್ಟಿದ್ದಾರೆ. ಕೂಡಲೇ ಬಾಲಕಿ ಕಾರಿನಿಂದಿಳಿದಿದ್ದಾಳೆ. ವ್ಯಕ್ತಿ ಸಾರ್ವಜನಿಕರ ಕೈಗೆ ಸಿಗದೆ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಬಾಲಕಿಯ ಸಹೋದರಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT